ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

ಜಾರ್ಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು; ಹೈದರಾಬಾದ್ ನಲ್ಲಿ ಶಾಸಕರು!

ಹೈದರಾಬಾದ್ ಗೆ ಬಂದಿರುವ ಜೆಎಂಎಂ ನಾಯಕ

Author2 by Author2
February 1, 2024
in Politics, ರಾಜಕೀಯ
Share on FacebookShare on TwitterShare on WhatsappShare on Telegram

ಜಾರ್ಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆಸಿದ್ದು, ಜೆಎಂಎಂ ನಾಯಕ 43 ಶಾಸಕರೊಂದಿಗೆ ಹೈದರಾಬಾದ್ ಗೆ ಬಂದಿಳಿದಿದ್ದಾರೆ.

ಈಗ ಜಾರ್ಖಂಡ್ ನಲ್ಲಿ ಸಿಎಂ ಇಲ್ಲದೆ ಸುಮಾರು 24 ಗಂಟೆಗಳ ಕಾಲ ಕಳೆದಿದೆ. 81 ಸದಸ್ಯರ ವಿಧಾನಸಭೆಯಲ್ಲಿ ಜೆಎಂಎಂ (JMM) ನಾಯಕ 43 ಶಾಸಕರ ಬೆಂಬಲ ಪಡೆದಿದ್ದರೂ ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸಲು ಜಾರ್ಖಂಡ್ ಮುಕ್ತಿ ಮೋರ್ಚಾದ ಹೊಸದಾಗಿ ಚುನಾಯಿತ ನಾಯಕ ಚಂಪೈ ಸೊರೆನ್ (Champai Soren) ಅವರಿಗೆ ಆಹ್ವಾನ ನೀಡಲು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ನಿರಾಕರಿಸಿದ್ದಾರೆ.

Related posts

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

March 10, 2026
ರಾಷ್ಟ್ರಪತಿ ನಿಂತಿದ್ದಾರೆ, ನೀವು ಕುಳಿತಿದ್ದೀರಿ: ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಫೋಟೋ ಸಮರ ಶುರು

ರಾಷ್ಟ್ರಪತಿ ನಿಂತಿದ್ದಾರೆ, ನೀವು ಕುಳಿತಿದ್ದೀರಿ: ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಫೋಟೋ ಸಮರ ಶುರು

March 10, 2026

ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಹೇಮಂತ್ ಸೊರೆನ್ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿದೆ. ಹೀಗಾಗಿ ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಚಂಪೈ ಸೊರೆನ್, ತಮಗೆ ಸಿಎಂ ಆಗಲು ಬೇಕಾಗಿರುವ ಬೆಂಬಲವಿದೆ ಎಂದು 43 ಶಾಸಕರು ತನ್ನೊಂದಿಗೆ ಇರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಆನಂತರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು, ವಿಡಿಯೊ ಮತ್ತು ಬೆಂಬಲ ಪತ್ರಗಳ ಹೊರತಾಗಿಯೂ, ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿಲ್ಲ. ಆದರೆ, ಸದ್ಯದಲ್ಲಿಯೇ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಚಂಪೈ ಸೊರೆನ್ ಹೇಳಿದ್ದಾರೆ.

81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಯ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವು ಜೆಎಂಎಂನ 29, ಕಾಂಗ್ರೆಸ್‌ನ 17 ಮತ್ತು ಆರ್‌ಜೆಡಿಯ 1 ಸೇರಿದಂತೆ 47 ಶಾಸಕರನ್ನು ಹೊಂದಿದೆ. ಬಿಜೆಪಿ 25 ಸದಸ್ಯರನ್ನು ಹೊಂದಿದೆ ಮತ್ತು ಎಜೆಎಸ್‌ಯು ಮೂವರು ಶಾಸಕರನ್ನು ಹೊಂದಿದೆ. ಎನ್ಸಿಪಿ ಮತ್ತು ಸಿಪಿಐ (ML) ತಲಾ ಒಬ್ಬ ಸದಸ್ಯರನ್ನು ಹೊಂದಿದ್ದು, ಮೂವರು ಪಕ್ಷೇತರರಿದ್ದಾರೆ.

ಹೀಗಾಗಿ ಶಾಸಕರನ್ನು ಹೊರಗೆ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇರುವ ಹೈದರಾಬಾದ್‌ಗೆ ಶಾಸಕರನ್ನು ಕರೆತರಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೆಎಂಎಂ ನಾಯಕ ಹಾಗೂ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Tags: Political crisis in Jharkhand; MLA in Hyderabad!
ShareTweetSendShare
Join us on:

Related Posts

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

by Shwetha
March 10, 2026
0

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು...

ರಾಷ್ಟ್ರಪತಿ ನಿಂತಿದ್ದಾರೆ, ನೀವು ಕುಳಿತಿದ್ದೀರಿ: ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಫೋಟೋ ಸಮರ ಶುರು

ರಾಷ್ಟ್ರಪತಿ ನಿಂತಿದ್ದಾರೆ, ನೀವು ಕುಳಿತಿದ್ದೀರಿ: ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಫೋಟೋ ಸಮರ ಶುರು

by Shwetha
March 10, 2026
0

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಈಗ ರಾಷ್ಟ್ರಪತಿಗಳ ಗೌರವದ ವಿಚಾರವಾಗಿ ದೊಡ್ಡ ಹಗ್ಗಜಗ್ಗಾಟ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳ ಸರ್ಕಾರದ ವಿರುದ್ಧ ಮಾಡಿದ ಟೀಕೆಗಳಿಗೆ...

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

by Shwetha
March 10, 2026
0

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವಂತಹ ಮಹತ್ವದ ಘೋಷಣೆ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವನ್ನು...

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

by Shwetha
March 9, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆಯಿಂದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಬರೋಬ್ಬರಿ 1,069 ಕೋಟಿ ರೂಪಾಯಿಗಳ ಬೃಹತ್ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ...

ಮೋದಿ ಮಾಡಿದ್ದು ಸಾಲ ಅಲ್ವಾ ಬಜೆಟ್ ಟೀಕಿಸಿದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

ಮೋದಿ ಮಾಡಿದ್ದು ಸಾಲ ಅಲ್ವಾ ಬಜೆಟ್ ಟೀಕಿಸಿದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

by Shwetha
March 8, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ. ಬಜೆಟ್ ಅನ್ನು ಅಭಿವೃದ್ಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram