ಬೆಂಗಳೂರು : ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡಲು ಸುಲಭವಾಗಿದ್ದ ಗೂಗಲ್ ಪೇ ಅ್ಯಪ್ ಬಗ್ಗೆ ಕೆಲ ದಿನಗಳಿಂದ ವದಂತಿವೊಂದು ಹರಿದಾಡುತ್ತಿದೆ. ಗೂಗಲ್ ಪೇ ಆ್ಯಪ್ ಅಧಿಕೃತವಾಗಿದ್ದಲ್ಲ. ಜೊತೆಗೆ ಗೂಗಲ್ ಯಲ್ಲಿ ಆಗುವ ಹಣ ವರ್ಗಾವಣೆಗೆ ರಕ್ಷಣೆ ಇಲ್ಲ ಎಂಬ ವದಂತಿ ಹರಿದಾಡುತ್ತಿತ್ತು. ಆದರೆ ಈ ಸುದ್ದಿ ಸುಳ್ಳು ಹಾಗಾಗಿ ಇದನ್ನು ನಂಬಬಾರದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿಸಿಐ) ಹೇಳಿದೆ.
ಗೂಗಲ್ ಪೇ ಅನ್ನು ಥರ್ಡ್‌ಪಾರ್ಟಿ ಆ್ಯಪ್ ಪ್ರೊವಿಡರ್ ಎಂದು ವರ್ಗೀಕರಿಸಲಾಗಿದೆ. ಇತರ ಸಂಸ್ಥೆಗಳಂತೆಯೇ ಯುಪಿಐ ಪಾವತಿ ಸೇವೆ ಒದಗಿಸುತ್ತಿದೆ. ಎನ್‌ಪಿಸಿಐನ ಯುಪಿಐ ಚೌಕಟ್ಟಿನಡಿ ಬ್ಯಾಂಕಿಂಗ್ ಪಾಲುದಾರರ ಜತೆ ಕೆಲಸಮಾಡುತ್ತದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಎನ್ನುವುದು ಮೊಬೈಲ್ ಮೂಲಕ ಎರಡು ಬ್ಯಾಂಕ್ ಖಾತೆಗಳ ಮಧ್ಯೆ ತಕ್ಷಣಕ್ಕೆ ಹಣ ವರ್ಗಾಯಿಸುವುದಾಗಿದೆ. ಯುಪಿಐ ಆ್ಯಪ್‌ಗಳನ್ನು ದೇಶದಲ್ಲಿ ಥರ್ಡ್ ಪಾರ್ಟಿ ಆ್ಯಪ್ ಎಂದು ವರ್ಗೀಕರಿಸಲಾಗಿದೆ.
ಎಲ್ಲ ಅಧಿಕೃತ ಟಿಪಿಎಪಿಗಳು ರಾಷ್ಟ್ರೀಯ ಪಾವತಿ ನಿಗಮದ ಅಂತರ್ಜಾಲ ತಾಣದಲ್ಲಿ ಪಟ್ಟಿಯಾಗುತ್ತವೆ. ಅಧಿಕೃತ ಟಿಪಿಎಪಿ ಬಳಸಿ ನಡೆಯುವ ಎಲ್ಲ ವಹಿವಾಟುಗಳು ಆರ್‌ಬಿಐ ಮತ್ತು ಎನ್‌ಪಿಸಿಐ ರೂಪಿಸಿರುವ ಮಾರ್ಗದರ್ಶಿ ಸೂತ್ರ ಮತ್ತು ಪರಿಹಾರ ಪ್ರಕ್ರಿಯೆಯ ಸುರಕ್ಷತೆಗೆ ಒಳಪಟ್ಟಿರುತ್ತದೆ. ಅಲ್ಲದೆ ಎಲ್ಲ ಅಧಿಕೃತ ಟಿಪಿಎಪಿಗಳು ಕಾನೂನು ಮತ್ತು ನಿಯಂತ್ರಣ ಕ್ರಮಗಳಿಗೆ ಬದ್ಧವಾಗಿವೆ.
ಇನ್ನೂ ವಿಚಾರವಾಗಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಗೂಗಲ್ ಪೇ ಆ್ಯಪ್ ಸಂಸ್ಥೆ, ಗೂಗಲ್ ಪೇ ಆ್ಯಪ್ ಮೂಲಕ ನಡೆಯುವ ಹಣ ಪಾವತಿಯು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಪರಿಹಾರ ಪ್ರಕ್ರಿಯೆಯ ರಕ್ಷಣೆಗೆ ಒಳಪಟ್ಟಿರುತ್ತದೆ. ಗೂಗಲ್ ಪೇ ಆ್ಯಪ್ ಅನಧಿಕೃತ ಎಂದು ಆರ್‌ಬಿಐ ದೆಹಲಿ ಹೈಕೋರ್ಟ್‌ಗೆ ಹೇಳಿಲ್ಲ ಎಂದು ಹೇಳಿದರೆ.
ಅದೊಂದು ಟಿಪಿಎಪಿ ಆಗಿದ್ದು ಯಾವುದೇ ರೀತಿಯ ಪಾವತಿ ವ್ಯವಸ್ಥೆ ನಿರ್ವಹಿಸುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ದೆಹಲಿ ಹೈಕೋರ್ಟ್‌ಗೆ ಹೇಳಿದೆ.








