ಕೊಲಂಬೊ: ಶ್ರೀಲಂಕಾ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ (Pathum Nissanka) ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ದ್ವಿಶತಕ (ODI Double Century) ಸಿಡಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಈ ಮೂಲಕ 24 ವರ್ಷಗಳಿಂದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಹೆಸರಿನಲ್ಲಿದ್ದ ಹಳೆಯ ದಾಖಲೆ ನುಚ್ಚುನೂರು ಮಾಡಿದ್ದಾರೆ. ಜೊತೆಗೆ ದ್ವಿಶತಕ ಸಿಡಿಸಿದ ವಿಶ್ವದ ಟಾಪ್-10 ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಯಸೂರ್ಯ 2000ರಲ್ಲಿ ಟೀಂ ಇಂಡಿಯಾ ವಿರುದ್ಧ 189 ರನ್ ಗಳಿಸಿದ್ದರು. ಇದು ಶ್ರೀಲಂಕಾ ಬ್ಯಾಟರ್ ಗಳ ಪೈಕಿ ಏಕದಿನ ಕ್ರಿಕೆಟ್ ನಲ್ಲಿ ಆಟಗಾರರೊಬ್ಬರು ಗಳಿಸಿದ್ದ ಗರಿಷ್ಠ ಸ್ಕೋರ್ ಆಗಿತ್ತು.
ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ನೀಡಿತು. 50 ವರ್ಷಗಳಲ್ಲಿ 3 ವಿಕೆಟ್ ಗಳೆದುಕೊಂಡು 381 ರನ್ ಗಳಿಸಿದೆ. ಟಾಸ್ ಸೋತು ಮೊದಲು ಕ್ರೀಸ್ಗಿಳಿದ ಲಂಕಾ ಪರ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ ಅಜೇಯ 136 ಎಸೆತಗಳಲ್ಲಿ 200 ರನ್ (19 ಬೌಂಡರಿ, 7 ಸಿಕ್ಸರ್) ಬಾರಿಸಿದ ನಿಸ್ಸಾಂಕ, ಒಟ್ಟಾರೆ ಎದುರಿಸಿದ 139 ಎಸೆತಗಳಲ್ಲಿ ಅಜೇಯ 210 ರನ್ ಸಿಡಿಸಿದರು.
ದ್ವಿಶತಕ ಸಿಡಿಸಿದ ಆಟಗಾರರ ಪೈಕಿ ಟೀಂ ಇಂಡಿಯಾ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 264 ರನ್ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅಗ್ರಸ್ಥಾನದಲ್ಲಿದ್ದಾರೆ. ಮಾರ್ಟಿನ್ ಗಪ್ಟಿಲ್ (237 ರನ್), ವೀರೇಂದ್ರ ಸೆಹ್ವಾಗ್ (219 ರನ್), ಕ್ರಿಸ್ಗೇಲ್ (215 ರನ್), ಫಖರ್ ಝಮಾನ್ (210 ರನ್), ಪಾಥುಮ್ ನಿಸ್ಸಾಂಕ ಅಜೇಯ 210 ರನ್ ಗಳಿಸಿ ಸದ್ಯ 6ನೇ ಸ್ಥಾನದಲ್ಲಿದ್ದಾರೆ.