ಮ್ಯಾಡ್ರಿಡ್: ಟೆನಿಸ್ ನ ದಿಗ್ಗಜ ರಾಫೆಲ್ ನಡಾಲ್ (Rafael Nadal) ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್ ದಿಢೀರ್ ಎಂದು ವಿದಾಯ ಘೋಷಿಸಿದ್ದಾರೆ. ಸ್ಪ್ಯಾನಿಷ್ ದಂತಕಥೆ ನಡಾಲ್, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ವೃತ್ತಿ ಜೀವನದುದ್ದಕ್ಕೂ ಬೆಂಬಲ ನೀಡಿದವರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ. ಇದು ಕಠಿಣ ನಿರ್ಧಾರವಾದರೂ ಒಂದಿಲ್ಲೊಂದು ದಿನ ಎಲ್ಲದಕ್ಕೂ ಅಂತ್ಯವಿದೆ ಎಂದಿದ್ದಾರೆ.
ನವೆಂಬರ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ ಮ್ಯಾಚ್, ನಡಾಲ್ ಅವರ ಅಂತಿಮ ಪಂದ್ಯಾವಳಿಯಾಗಿದೆ. ನವೆಂಬರ್ 19ರಂದು ನಡೆಯಲಿರುವ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ನಡಾಲ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.








