ಧಾರವಾಡ: ಆತ್ಮವಿಶ್ವಾಸ, ಸಾಧಿಸುವ ಛಲ ಇದ್ದರೆ ಸಾಕು ಏನನ್ನಾದರೂ ಸಾಧಿಸಬುದು ಎಂಬುವುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.
ಇಲ್ಲಿಯ ಜಯನಗರದಲ್ಲಿನ ಮಾರ್ಕಂಡೇಯ ದೊಡಮನಿ ಎಂಬ ವ್ಯಕ್ತಿ ತಮ್ಮ 89ನೇ ವಯಸ್ಸಿನ ಪಿಎಚ್ ಡಿ ಮುಗಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಶಿವಶರಣರ ಬಗ್ಗೆ ಅಧ್ಯಯನ ಮಾಡಿ ಪಿಎಚ್ಡಿ ಮಾಡಿದ್ದಾರೆ. ಶೈಕ್ಷಣಿಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವೃದ್ಧರೊಬ್ಬರು ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ.
ಡೋಹರ ಕಕ್ಕಯ್ಯ ಅವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧ ಬರೆದು ಪಿಎಚ್ ಡಿ ಪಡೆದಿದ್ದಾರೆ. ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಇವರ ಗೈಡ್ ನಿಧನರಾದ ಹಿನ್ನೆಲೆಯಲ್ಲಿ ಪ್ರಬಂಧ ಸಿದ್ಧಪಡಿಸಲು ವಿಳಂಬವಾಯಿತು. ಆ ನಂತರ ಡಾ.ನಿಂಗಪ್ಪ ಮಾರ್ಗದರ್ಶನ ಮಾಡಿದ್ದಾರೆ. ಕಾದ್ರೊಳ್ಳಿ, ಕಕ್ಕೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿ ಕಕ್ಕಯ್ಯನವರ ಕುರಿತು ಅಧ್ಯಯನ ಮಾಡಿ ಪ್ರಬಂಧ ರಚಿಸಿದ್ದಾರೆ.








