ಬೆಂಗಳೂರು : ಕೊರೊನಾ ಸೋಂಕಿತರು ವಿಲನ್ ಗಳಲ್ಲ . ಅವರನ್ನು ವಿಲನ್ ಗಳಂತೆ ನೋಡಬೇಡಿ ಎಂದು ಸಾರ್ವಜನಿಕರಲ್ಲಿ ಬೆಂಗಳೂರು ಕೋವಿಡ್ ಉಸ್ತುವರಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡುವುದರ ಬಗ್ಗೆ ಇಂದು ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಮಾತನಾಡಿದ ಕಂದಾಯ ಆರ್, ಅಶೋಕ್ ಕೊರೊನಾ ಸೋಂಕಿತರು ವಿಲನ್ ಗಳಲ್ಲ. ಅದೊಂದು ಖಾಯಿಲೆ, ಸೋಂಕು ಅಷ್ಟೇ, ಎಚ್ಚರಿಕೆ ಕ್ರಮ ತೆಗೆದುಕೊಳ್ಳಿ. ಆದರೆ ಸೋಂಕಿತರನ್ನು ವಿಲನ್ ಗಳಂತೆ ನೋಡಬೇಡಿ. ನಿಮ್ಮ ಮನೆಯ ಎದರುಗಡೆ ಇರಲಿ ಎಲ್ಲೇ ಇರಲಿ ಅವರನ್ನು ವಿಲನ್ ಗಳಂತೆ ನೋಡಬೇಡಿ ಎಂದು ಕಂದಾಯ ಸಚಿವ ಆರ್ ಅಶೋಕ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೆಲ ಕಡೆ ಕೊರೊನಾ ಸೋಂಕಿತರನ್ನು ಒಂದು ತರನಾಗಿ ಕಾಣುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳಲ್ಲಿ ಹರಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕೋವಿಡ್ ಉಸ್ತುವರಿ ಸಚಿವ ಆರ್ ಅಶೋಕ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಾಗುತ್ತಿದೆ.








