ಉಡುಪಿ: ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿ ಜೈಲು ಸೇರಿರುವ ಅಮೂಲ್ಯ, ಇಂದು ಭಾಗಿಯಾಗಬೇಕಿದ್ದ ಕಾರ್ಯಕ್ರಮದ ಆವರಣದಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದೆ. ಕಾಪು ತಾಲೂಕಿನ ಬೆಳಪು ಗ್ರಾಮದ ಮಲ್ಲಾರ್ ಮುಸ್ಲಿಂ ಒಕ್ಕೂಟ ಸಿಎಎ ವಿರೋಧಿ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಈ ಹೊತ್ತಿನಲ್ಲೇ ಬೆಳಪು ಮೈದಾನದಲ್ಲಿ ದೊಡ್ಡ ಸುಂಟರಗಾಳಿಯೊಂದು ಸುತ್ತಿದ್ದು ಅದರ ರಭಸಕ್ಕೆ ಹತ್ತಾರು ಕುರ್ಚಿಗಳು ಗಾಳಿಯಲ್ಲಿ ಗಿರಕಿ ಹೊಡಿವೆ.
ಅಮೂಲ್ಯ ಈ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಬೇಕಾಗಿತ್ತು. ಮೈದಾನದಲ್ಲಿ ಎದ್ದ ಭೀಕರ ಸುಂಟರಗಾಳಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ಯ ಸುಂಟರಗಾಳಿ ಎಂಬ ಹೆಸರಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಈಗ ಪರಪ್ಪನ ಅಗ್ರಹಾರ ಸೇರಿದ್ದಾಳೆ.
ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ
ಬೆಂಗಳೂರು : ಅಧಿಕಾರ ಇರಲಿ, ಬಿಡಲಿ ಶೋಷಿತರ ಮತ್ತು ಅವಕಾಶ ವಂಚಿತರ ಪರವಾದ ನನ್ನ ಧ್ವನಿ ಸದಾ ಮೊಳಗುತ್ತಲೇ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...








