ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ಅಲ್ಲೂರಿ ಸೀತಾರಾಮ ರಾಜು ಆಗಿ ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಕೊಮರಂ ಭೀಮ್ ಆಗಿ ಯಂಗ್ ಟೈಗರ್ ಎನ್ ಟಿಆರ್ ನಟಿಸುತ್ತಿದ್ದಾರೆ. ಸ್ಟಾರ್ ಕಾಸ್ಟಿಂಗ್ ನಿಂದಲೇ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. 
ಈಗಾಗಲೇ ಚರಣ್ ಪಾತ್ರದ ಟೀಸರ್, ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸೆನ್ಷೇಶನ್ ಕ್ರಿಯೆಟ್ ಮಾಡಿವೆ. ಸದ್ಯ ಕೊರೊನಾದಿಂದಾಗಿ ಸಿನಿಮಾದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಏತನ್ಮಧ್ಯೆ ಚಿತ್ರದ ನಾಯಕಿ ಎಮ್ಮಾ ರಾಬರ್ಟ್ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಇದು ಚಿತ್ರ ನಿರ್ದೇಶಕ ರಾಜಮೌಳಿಗೆ ತಲೆಕೆಡಿಸಿದೆ.
ಅಯ್ಯೋ ರಾಮ..! ನಟಿ ಎಮ್ಮಾ ರಾಬರ್ಟ್ ಗರ್ಭಿಣಿ ಆದರೇ ರಾಜಮೌಳಿ ಯಾಕೆ ತಲೆ ಕೆಡಿಸಿಕೊಂಡಿದ್ದಾರೆ..? ಅಂತಾ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ಮುಂದಿದೆ…
ನಟಿ ಎಮ್ಮಾ ರಾಬರ್ಟ್ ಆರ್ ಆರ್ ಆರ್ ಸಿನಿಮಾದಲ್ಲಿ ಎನ್ ಟಿ ಆರ್ ಗೆ ನಾಯಕಿ ಆಗಿ ನಟಿಸಬೇಕಿತ್ತು. ಆದ್ರೆ ಈಗ
ಎಮ್ಮಾ ಗರ್ಭಿಣಿ ಆಗಿರುವುದರಿಂದ ಮತ್ತೆ ಸಿನಿಮಾದಲ್ಲಿ ಅಭಿನಯಿಸುವುದು ಅನುಮಾನವಾಗಿದೆ. ಹಾಗಾಗಿ ರಾಜಮೌಳಿ ಅಂಡ್ ಟೀಂ ಮತ್ತೆ ಬೇರೆ ನಾಯಕಿಯ ಹುಡುಕಾಟದಲ್ಲಿದೆ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ಈಗಾಗಲೇ ಚರಣ್ ಗೆ ಜೋಡಿಯಾಗಿ ನಟಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಬ್ರಿಟನ್ ನಾಯಕಿಯ ಅವಶ್ಯಕಥೆ ಇದೆ ಎಂದು ಹಾಲಿವುಡ್ ನ ಖ್ಯಾತ ನಟಿ ಎಮ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಎಮ್ಮಾ, ಜೂ ಎನ್ ಟಿ ಆರ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಎಮ್ಮಾ ನಟಿಸುವುದು ಅನುಮಾನವಾಗಿದೆ.
ಇನ್ನು ಎಮ್ಮಾ ರಾಬರ್ಟ್ ಗರ್ಭಿಣಿ ಆಗಿರುವ ವಿಚಾರವನ್ನು ತಾಯಿ ಕೆಲ್ಲಿ ಕನ್ನಿಂಗ್ಯಾಮ್ ಅವರು ಬಹಿರಂಗ ಪಡಿಸಿದ್ದಾರೆ.ನಟಿ ಎಮ್ಮಾ ರಾಬರ್ಟ್ ಈ ಮೊದಲು ಅಂದರೆ ಕಳೆದ ವರ್ಷದ ವರೆಗೂ ಪೀಟರ್ಸ್ ಜೊತೆ ಡೇಟಿಂಗ್ ನಲ್ಲಿದ್ದರು. 2019ರಲ್ಲಿ ಪೀಟರ್ ಜೊತೆ ಸಂಬಂಧ ಕಡಿದುಕೊಂಡು ದೂರ ಆದರು. ಸುಮಾರು 5 ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ಈ ಜೋಡಿ ಬೇರೆ ಬೇರೆ ಆಗಿದ್ದಾರೆ. ನಂತರ ಅಮೆರಿಕದ ನಟ ಗ್ಯಾರೆಟ್ ಹೆಡ್ಲಂಡ್ ಜೊತೆ ಡೇಟಿಂಗ್ ನಲ್ಲಿದ್ದರು. ಸದ್ಯ ಗ್ಯಾರೆಟ್ ಮತ್ತು ಎಮ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಒಟ್ಟಾರೆ ಕೊರೊನಾ ಕಾಟದ ನಡುವೆ ಮತ್ತೆ ನಾಯಕಿಯ ಹುಡುಕುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ಜೂ. ಎನ್ ಟಿ ಆರ್ ನಾಯಕಿಯ ಪಾತ್ರಕ್ಕೆ ವಿದೇಶಿ ನಟಿಯೇ ಬೇಕಾಗಿರುವುದರಿಂದ ಮತ್ಯಾವ ನಟಿಗೆ ಮಣೆ ಹಾಕುತ್ತಾರೆ ಎನ್ನುವುದು ಕಾದು ನೋಡಬೇಕು.








