ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ತಂಡಗಳಲ್ಲಿ ಭಾರೀ ಬದಲಾವಣೆ ಆಗಿದೆ.
ಗುಜರಾತ್ ಹಾಗೂ ಟೈಟಾನ್ಸ್ ಮಧ್ಯೆ ಮಾರ್ಚ್ 24 ರಂದು ಪಂದ್ಯ ನಡೆಯಲಿದ್ದು, ಎರಡರಲ್ಲಿಯೂ ಬದಲಾವಣೆಯಾಗಿದೆ. ಐಪಿಎಲ್ನ ಅಧಿಕೃತ ಎಕ್ಸ್ ನಲ್ಲಿ ಸಿಕ್ಕಿರುವ ಮಾಹಿತಿಯಂತೆ, ಮುಂಬೈ ಇಂಡಿಯನ್ಸ್ ತಂಡದ ದಿಲ್ಶಾನ್ ಮಧುಶಂಕಾ ಗಾಯಗೊಂಡಿದ್ದು, ಅವರ ಬದಲಿಗೆ ಎಡಗೈ ವೇಗಿ ಕ್ವೆನಾ ಮಫಕಾ ಆಯ್ಕೆಯಾಗಿದ್ದಾರೆ. ಮಫಕಾ ಅಂಡರ್-19 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಇನ್ನೊಂದೆಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೊಹಮ್ಮದ್ ಶಮಿ ಬದಲಿಗೆ ಸಂದೀಪ್ ವಾರಿಯರ್ ರನ್ನು ಸೇರಿಸಿಕೊಳ್ಳಲಾಗಿದೆ.