ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಇಂದು ಕೂಡ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ.
ಇಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಾ ಪ್ರಜೆಗಳು ಹಾಗೂ ಓರ್ವ ಪಾಕ್ ಪ್ರಜೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಸ್ಲಾಮಾಬಾದ್ ನಿಂದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದಾಸುನಲ್ಲಿನ ಶಿಬಿರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚೀನಾದ ಇಂಜಿನಿಯರ್ ಗಳ ಬೆಂಗಾವಲು ವಾಹನಕ್ಕೆ ಆತ್ಮಾಹುತಿ ಬಾಂಬರ್, ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಲಿ ಗಂದಾಪುರ್ ತಿಳಿಸಿದ್ದಾರೆ.
ದಾಳಿಯಲ್ಲಿ ಐವರು ಚೀನಿ ಪ್ರಜೆಗಳು ಹಾಗೂ ಅವರ ಪಾಕಿಸ್ತಾನಿ ಚಾಲಕ ಸಾವನ್ನಪ್ಪಿದ್ದಾನೆ. ದಾಸು ಎಂಬ ಆಣೆಕಟ್ಟಿನ ಪ್ರದೇಶದಲ್ಲಿ ಈ ಹಿಂದೆ ಕೂಡ ದಾಳಿ ನಡೆದಿತ್ತು. 2021ರಲ್ಲಿ ಬಸ್ ನಲ್ಲಿ ನಡೆದ ಸ್ಫೋಟದಲ್ಲಿ 9 ಜನ ಚೀನಾ ಪ್ರಜೆಗಳು ಸೇರಿದಂತೆ 13 ಜನ ಸಾವನ್ನಪ್ಪಿದ್ದರು. ಚೀನಾದ ಎಂಜಿನಿಯರ್ಗಳು ಮತ್ತು ಪಾಕಿಸ್ತಾನಿ ನಿರ್ಮಾಣ ಕಾರ್ಮಿಕರು ಹಲವಾರು ವರ್ಷಗಳಿಂದ ಪಶ್ಚಿಮ ಪ್ರಾಂತ್ಯದ ಖೈಬರ್-ಪಕ್ತುಂಕ್ವಾದಲ್ಲಿ ಬೀಜಿಂಗ್ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ನ ಭಾಗವಾಗಿ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದು, ದಾಸು ಪ್ರಮುಖ ಅಣೆಕಟ್ಟು ಯೋಜನೆಗಳ ತವರು ಆಗಿದ್ದು ಈ ಪ್ರದೇಶದಲ್ಲಿ ಈ ಹಿಂದೆಯೂ ದಾಳಿ ನಡೆದಿದೆ. 2021ರಲ್ಲಿ ಬಸ್ನಲ್ಲಿ ನಡೆದ ಸ್ಫೋಟದಲ್ಲಿ ಒಂಬತ್ತು ಚೀನಾ ಪ್ರಜೆಗಳು ಸೇರಿದಂತೆ 13 ಜನ ಸಾವನ್ನಪ್ಪಿದ್ದರು.
ದಾಳಿಯ ಸ್ವರೂಪದ ಸುತ್ತ ಗೊಂದಲವಿತ್ತು, ಕೆಲವು ವರದಿಗಳು ಇದು ಬಸ್ ಅಪಘಾತ ಎಂದು ಸೂಚಿಸುತ್ತವೆ. ಆದರೂ ತನಿಖೆಯ ನಂತರ ಮಾಹಿತಿ ತಿಳಿಯಲಿದೆ.