ಕೈಯಿಂದ ಮೊಬೈಲ್ ಜಾರಿ ಚರಂಡಿಯೊಳಗೆ ಬಿದ್ದ ಪರಿಣಾಮ ಫೋನ್ ತೆಗೆಯಲು ಆಕಸ್ಮಿಕವಾಗಿ ಚರಂಡಿಯೊಳಗೆ ಬಿದ್ದ ವ್ಯಕ್ತಿ 36 ಗಂಟೆ ಕಾಲ ಸಿಲುಕಿರುವ ಘಟನೆ ನಡೆದಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು 36 ಗಂಟೆಗಳ ನಂತರ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಬ್ರಿಸ್ಬೇನ್ ನಲ್ಲಿ ಈ ಘಟನೆ ನಡೆದಿದೆ. ಕೂಡಲೇ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಕೈ ನ್ಯೂಸ್ ವರದಿಯಂತೆ, ಬ್ರಿಸ್ಬೇನ್ ನದಿಯ ಕಾಂಗರೂ ಪಾಯಿಂಟ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕಿರುಚುತ್ತಿರುವುದು ಅಲ್ಲಿದ್ದ ಸ್ಥಳೀಯರಿಗೆ ಕೆಳಿಸಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೋಲ್ಟೆಡ್ ಡ್ರೈನ್ ಮುಚ್ಚಳ ತೆಗೆದು ಸಿಕ್ಕಿಬಿದ್ದ ವ್ಯಕ್ತಿ ರಕ್ಷಿಸಿದ್ದಾರೆ.