ADVERTISEMENT
Wednesday, October 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

“ಮೋದಿಯ ಮನ್ ಕೀ ಬಾತ್’ ನಲ್ಲಿ  ಕಾಮೇಗೌಡರ ಜಲ್  ಕೀ ಬಾತ್”

admin by admin
June 29, 2020
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಮಂಡ್ಯ : ಜೂನ್ ತಿಂಗಳ ‘ಮನ್ ಕೀ ಬಾತ್’  ಪ್ರಧಾನಿಯ  ಕಾರ್ಯಕ್ರಮ ಶುರುವಾಗಿತ್ತು. ಎಷ್ಟೇ ಸಮಸ್ಯೆವಿದ್ದರೂ , ಎಲ್ಲೇ ಪ್ರವಾಸದಲ್ಲಿದ್ದರು ತಿಂಗಳ ಈ ಕಾರ್ಯಕ್ರಮ ರದ್ದಾದ ನಿದರ್ಶವಿಲ್ಲ. ಪ್ರತಿ ತಿಂಗಳು ನಮ್ಮ ದೇಶದಲ್ಲಿ ತೆರೆಮರೆಯಲ್ಲಿ ಸದ್ದಿಲ್ಲದೇ ಸಾಧನೆ ಗೈದ ಒಬ್ಬೊಬ್ಬ  ಸಾಧಕರ ಪರಿಚಯವನ್ನು ದೇಶದ ಜನರಿಗೆ ಮಾಡಿಸುವ ಸಣ್ಣ ಪ್ರಯತ್ನ ಮೋದಿ ಮಾಡುತ್ತಿದ್ದಾರೆ.

ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ದಾಸನದೊಡ್ಡಿಯವರು. ಓದು ಕಾಣದ ಈ ಅಪರೂಪದ ವ್ಯಕ್ತಿ ಬೆಟ್ಟದಷ್ಟು ಅನುಭವ ಹೊಂದಿದ್ದಾರೆ. ಊರಲ್ಲಿ ಸ್ವಲ್ಪಜಮೀನು ಇದೆ. ಒಂದು ಸಣ್ಣಗುಡಿಸಲಿನ ಮನೆ. ಚಿಕ್ಕವಯಸಿನಿಂದ ಕುರಿ ಕಾಯುವ ಕಾಯಕ.

Related posts

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

October 7, 2026
SIR ಫಾರ್ಮ್‌-7 ವಿವಾದ: ಬಿಜೆಪಿ-ಜೆಡಿಎಸ್‌ ನಿಯೋಗದಿಂದ ರಾಜ್ಯಪಾಲರಿಗೆ ದೂರು, FIR ವಿರುದ್ಧ ಆಕ್ಷೇಪ

SIR ಫಾರ್ಮ್‌-7 ವಿವಾದ: ಬಿಜೆಪಿ-ಜೆಡಿಎಸ್‌ ನಿಯೋಗದಿಂದ ರಾಜ್ಯಪಾಲರಿಗೆ ದೂರು, FIR ವಿರುದ್ಧ ಆಕ್ಷೇಪ

October 7, 2026

ತನ್ನ ಊರಿಗೆ ಅಂಟಿಕೊಂಡಿರುವ ಕುಂದಿನಿ ಬೆಟ್ಟಕ್ಕೆ, ಕುರಿ ಮೇಯಿಸಲು ಹೋಗುತ್ತಿದ್ದರು. ಆದರೆ ಆ ಬೆಟ್ಟದ ಮೇಲೆ  ನೀರಿನ ಸಮಸ್ಯೆಯಿತ್ತು.  ಮಳೆ ನೀರು ಶೇಕರಣೆ  ಆಗದ ಇಳಿಜಾರು ಪ್ರದೇಶ  ನಿಜ ಹೇಳಬೇಕೆಂದರೆ  ಒಂದು ರೀತಿಯ ಬರಡು ಭೂಮಿ. ಬೇಸಗೆ ಬಂದರೆ  ಪ್ರಾಣಿಗಳಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು ಆ ಬೆಟ್ಟದಲ್ಲಿ.

ಬೆಟ್ಟದ ಬಗ್ಗೆ ಚಿಕ್ಕಂದಿನಿಂದಲೇ ಎಲ್ಲವನ್ನು ಅರಿತಿದ್ದ ಆತ ಏನು ಮಾಡಲು ಸಾಧ್ಯವೆಂದು ತನ್ನಲ್ಲೇ ತಾನು ಕಲ್ಪನೆಯನ್ನು ರೂಪಿಸಿದ. ತಡಮಾಡದೆ ತನ್ನ ಬಳಿ ಇರುವ ಕುರಿಗಳನ್ನು ಮಾರಿ ಕೆರೆ ನಿರ್ಮಾಣಕ್ಕೆ ಬೇಕಾದ  ಸಾಮಗ್ರಿ ಖರೀದಿ ಮಾಡಿ ಕೆರೆಯನ್ನು ತೋಡಲು ಶುರು ಮಾಡಿದರು. ಬೆಳಿಗ್ಗಿನ ಜಾವಾ  ಬುತ್ತಿ ಕಟ್ಟಿಕೊಂಡು, ಹೆಗಲ ಮೇಲೆ ಕಂಬಳಿ ಹೊದ್ದುಕೊಂಡು  ಬೆಟ್ಟಕ್ಕೆ ಬಂದರೆ ಸುಮಾರು 9  ಗಂಟೆಯವರೆಗೆ  ಕೆರೆ ತೋಡುವ ಕಾಯಕ. ನಂತರ ಸಂಜೆ  ವರೆಗೆ ಕುರಿ ಮೇಯಿಸುವ ಕೆಲಸ.  ವರ್ಷವಿಡೀ ಯಾವುದೇ ರಜೆ ಮಾಡದೇ ದುಡಿದ ಕಾಯಕ ಯೋಗಿ ಕಾಮೇಗೌಡರು.

ನಮ್ಮ ದೇಶದಲ್ಲಿ ಇಂತಹ ಸಾಧಕರಿಗೆ ಹುಚ್ಚ ಅನ್ನುವ ಪಟ್ಟ ಸರ್ವೇ ಸಾಮಾನ್ಯವಾಗಿರುತ್ತದೆ. ಬರಡು ಭೂಮಿಯಲ್ಲಿ ನೀರು ಹುಡುಕುವ ಹುಂಬತನಕ್ಕೆ ಬೇರೆ ಏನೆಂದರೂ . ಆದರೆ ಅದು ಯಾವುದಕ್ಕೂ  ತಲೆ ಕೆಡೆಸಿಕೊಳ್ಳದೆ ಕಾಮೇಗೌಡರು ಮಾತ್ರ ಸದಾ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಮೊದಲ ಕೆರೆಯಲ್ಲಿ ನೀರು ಸಿಕ್ಕಿದ ಮೇಲೆ ತಮ್ಮ ಕೆಲಸವನ್ನು ನಿಲ್ಲಿಸಲೇ ಇಲ್ಲ. ಕಳೆದ 42 ವರ್ಷಗಳಲ್ಲಿ ಕಾಮೆಗೌಡರು 14 ಕೆರೆಗಳನ್ನು ತೋಡಿ ಮುಗಿಸಿದ್ದಾರೆ. ಎಲ್ಲಾ ಕೆರೆಗಳು ನೀರಿನ ಮೂಲವಾಗಿವೆ.

ಇವರ ಈ  ಉತ್ಸಾಹವನ್ನು  ನೋಡಿ ಅನೇಕ ಜನ ಖುಷಿ ಪಟ್ಟಿದ್ದಾರೆ. ಸುತ್ತಮುತ್ತಲಿನ ಜನ ‘ ಕೊಳದ  ಅಣ್ಣ ‘ ಎಂದು ಕರೆದರು. ಕೆಲವರು ಶ್ರಮದಾನವನ್ನು ಮಾಡಿ ಗೌಡರ ಬೆಂಬಲಕ್ಕೆ ನಿಂತರೆ ಇನ್ನು ಕೆಲವರು ಧನ ಸಹಾಯ ಮಾಡಿದರು. ಹುಡುಕಿಕೊಂಡು ಬಂದದ್ದು ಹತ್ತಾರು ಜನ ಸನ್ಮಾನ ಸಮಾರಂಭ ಮಾಡಿ ಬಹುಮಾನ ಕೊಟ್ಟರು. ಬಂದ ದುಡ್ಡನ್ನು ಕೆರೆಯನ್ನು ತೋಡುವ ಕಾಯಕಕ್ಕೆ ಸುರಿದಿದ್ದಾರೆ. ಸುಮಾರು  15 ಲಕ್ಷಕ್ಕಿಂತ ಹೆಚ್ಚು ದುಡ್ಡನ್ನು ಅವರು ಕೆರೆ ತೋಡುವ ಕೆಲಸಕ್ಕೆ ಮೀಸಲಿಟ್ಟರು.

ಕಾಮೇಗೌಡರು ಶಾಲೆಗೆ ಹೋಗದಿದ್ದರೂ ಒಬ್ಬ ಆಧುನಿಕ ಭಗೀರಥರಾಗಿದ್ದಾರೆ.  “ಯುಗಾದಿ ಮತ್ತು ಶಿವರಾತ್ರಿ ನಡುವೆ ಭೂಮಿಯು  ತೇವಾಂಶವನ್ನು ಹಿಡಿದಿಟ್ಟು  ಕೊಳ್ಳುತ್ತದೆ. ಆಗ ಅಂತರಜಲದ ಒರತೆ ಪತ್ತೆ ಹಚ್ಚುವುದು  ಸುಲಭ” ಎನ್ನುತ್ತಾರೆ. ಮೊದಲು ತೋಡಿದ ಎರಡು ಕೆರೆಗಳಿಗೆ ಅವರು ತಮ್ಮ ಮಕ್ಕಳಾದ ಪೂಜಾ ಮತ್ತು ಪೂರ್ವಿ ಅವರ ಹೆಸರು ಇಟ್ಟಿದ್ದಾರೆ. ನಂತರದ ಎಲ್ಲಾ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಮತ್ತು ಮರಿ ಮಕ್ಕಳ ಹೆಸರು ಇಟ್ಟಿದ್ದಾರೆ.

ಈಗ 84 ವರ್ಷ ಆಗಿದ್ದರೂ ಅವರ ಉತ್ಸಾಹ ಕುಂದಿಲ್ಲ. ‘ಪ್ರಧಾನಿಗಳು ನಿಮ್ಮ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತನಾಡಿದರಲ್ಲ ಅಂದಾಗ ಅವರ ಮೊಗದಲ್ಲಿ ಒಂದು ಸಾರ್ಥಕ ಸೇವೆಯ ಸಮಾಧಾನವಿತ್ತು. ಮತ್ತೆ ಮಾತನಾಡಿದ ಅವರು “ಭಾರತದಲ್ಲಿ ಹುಟ್ಟಿದ್ದು ಸಾರ್ಥಕ ಅನ್ನಿಸುತ್ತಿದೆ. ನಾನು ಸಾಯುವ ತನಕ ನನ್ನ ಕೆರೆ ತೋಡುವ ಕಾಯಕ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ.

ಕಾಮೇಗೌಡರ ಪರಿಸರ ಸೇವೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.  ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರದು ಅಪರೂಪದ ಪರಿಸರ ಕಾಳಜಿ. 80ರ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಸಣ್ಣ ಕೆರೆಗಳನ್ನು ನಿರ್ಮಿಸುವ ಅವರ ನಡೆ ಅನುಕರಣೀಯ ಮತ್ತು ಅಭಿನಂದನಾರ್ಹವಾದುದು.

ಕಾಮೇಗೌಡರು ಕುಂದಿನಿ ಬೆಟ್ಟದಲ್ಲಿ ನಿರ್ಮಿಸಿರುವ 14 ಕೆರೆಗಳೇ ಅವರ ನಿಸ್ವಾರ್ಥ ಪರಿಸರ ಕಾಳಜಿಯನ್ನು ಸಾರುತ್ತವೆ. ಈ ಕೆರೆಗಳಿಂದ ಬೆಟ್ಟದಲ್ಲಿ ಹಸಿರು ಸದಾ ಉಳಿದಿದೆ. ಗೌಡರು ತಮಗೆ ಸಿಕ್ಕ ಪ್ರಶಸ್ತಿಗಳ ಹಣವನ್ನೆಲ್ಲ ಕೆರೆಗಳ ನಿರ್ಮಾಣಕ್ಕೇ ಬಳಸುತ್ತಾ ಬಂದಿದ್ದಾರೆ. ಇಂತಹ ಅಪರೂಪದ ಪರಿಸರ ಕಾಳಜಿ ಮೆರೆಯುತ್ತಿರುವ ಗೌಡರಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಹಾರೈಸೋಣ ಹೇಳಿದ್ದಾರೆ.

Tags: kame-gowda
ShareTweetSendShare
Join us on:

Related Posts

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

by Shwetha
October 7, 2026
0

ನವದೆಹಲಿ: ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮರೆಯಾಗುತ್ತಿದೆ ಮತ್ತು ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಈಗ ಕೇಂದ್ರ ಸರ್ಕಾರದ ವಿರುದ್ಧ ಅಂತಿಮ ಹಂತದ...

SIR ಫಾರ್ಮ್‌-7 ವಿವಾದ: ಬಿಜೆಪಿ-ಜೆಡಿಎಸ್‌ ನಿಯೋಗದಿಂದ ರಾಜ್ಯಪಾಲರಿಗೆ ದೂರು, FIR ವಿರುದ್ಧ ಆಕ್ಷೇಪ

SIR ಫಾರ್ಮ್‌-7 ವಿವಾದ: ಬಿಜೆಪಿ-ಜೆಡಿಎಸ್‌ ನಿಯೋಗದಿಂದ ರಾಜ್ಯಪಾಲರಿಗೆ ದೂರು, FIR ವಿರುದ್ಧ ಆಕ್ಷೇಪ

by Shwetha
October 7, 2026
0

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ Form 7 ಅರ್ಜಿಗಳ ಬಳಕೆಗೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಬಿಜೆಪಿ ಮತ್ತು ಜೆಡಿಎಸ್‌...

ಹಾಸನ ಡಿಸಿ ಮತ್ತು ಎಸ್​ಪಿ ಜಟಾಪಟಿಗೆ ಹೆಚ್ ಡಿ ರೇವಣ್ಣ ಎಂಟ್ರಿ: ಅಧಿಕಾರಿಗಳನ್ನು ಹೇಗೆ ರಿಪೇರಿ ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ವಾರ್ನಿಂಗ್

ಹಾಸನ ಡಿಸಿ ಮತ್ತು ಎಸ್​ಪಿ ಜಟಾಪಟಿಗೆ ಹೆಚ್ ಡಿ ರೇವಣ್ಣ ಎಂಟ್ರಿ: ಅಧಿಕಾರಿಗಳನ್ನು ಹೇಗೆ ರಿಪೇರಿ ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ವಾರ್ನಿಂಗ್

by Shwetha
October 7, 2026
0

ಹಾಸನ: ಹಾಸನ ಜಿಲ್ಲಾಡಳಿತದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡುವೆ ಶೀತಲ ಸಮರ ಸ್ಫೋಟಗೊಂಡಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗಣಪತಿ ವಿಸರ್ಜನೆಗೆ...

FSSAI ವಿರುದ್ಧದ ಕಾನೂನು ಸಮರದಲ್ಲಿ ರಿಲಯನ್ಸ್‌ಗೆ ತಾತ್ಕಾಲಿಕ ಜಯ: ‘ಎನರ್ಜಿ ಡ್ರಿಂಕ್’ ಆಗಿ ಕ್ಯಾಂಪಾ ಮಾರಾಟಕ್ಕೆ ಹೈಕೋರ್ಟ್ ಅನುಮತಿ

FSSAI ವಿರುದ್ಧದ ಕಾನೂನು ಸಮರದಲ್ಲಿ ರಿಲಯನ್ಸ್‌ಗೆ ತಾತ್ಕಾಲಿಕ ಜಯ: ‘ಎನರ್ಜಿ ಡ್ರಿಂಕ್’ ಆಗಿ ಕ್ಯಾಂಪಾ ಮಾರಾಟಕ್ಕೆ ಹೈಕೋರ್ಟ್ ಅನುಮತಿ

by Shwetha
October 7, 2026
0

ಕ್ಯಾಂಪಾ ಪಾನೀಯಗಳನ್ನು ‘ಎನರ್ಜಿ ಡ್ರಿಂಕ್’ ಎಂದು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನಡುವಿನ ಕಾನೂನು ಸಮರದಲ್ಲಿ...

ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

by Shwetha
October 7, 2026
0

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಚು ರೂಪಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram