ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಸರ್ಕಾರಗಳು ಸಭೆ, ಸಮಾರಂಭಗಳಿಗೆ ಬ್ರೇಕ್ ಹಾಕಿದೆ. ಸರ್ಕಾರನ ಆದೇಶಗಳಿಗೆ ಕ್ಯಾರೆ ಎನ್ನದೆ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಪ್ತ ತಾರಾ ಹೊಟೆಲ್ ಲಾ ಕ್ಲಾಸಿಕ್ ಮತ್ತು ಗೆಸ್ಟ್ ಲೈನ್ ಹೋಟೆಲ್ ನಲ್ಲಿ ಅದ್ಧೂರಿ ಸಮಾರಂಭ ಆಯೋಜನೆ ಮಾಡಲಾಗಿದೆ.
ರಾಯಲ್ ಡ್ರೀಮ್ ಟು ಫ್ಲೈ ಕಂಪನಿ ಆಯೋಜಿಸಿದ್ದ ಸಮಾರಂಭದಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ. ಸಾಮಾಜಿಕ ಅಂತರವಿಲ್ಲ. ಮಾಸ್ಕ್ ಧರಿಸಿಲ್ಲ. ಒಟ್ಟಿನಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಡ್ರೀಮ್ ಟು ಫ್ಲೈ ಕಂಪನಿ ವಂಚಕ ಕಂಪನಿಗಳಲ್ಲೊಂದು, ಇದು ಎಂ.ಎಲ್.ಎಂ. ಕಂಪನಿ ಆಗಿದ್ದು ಈ ತರಹದ ಹಲವಾರು ಮಕ್ಮಲ್ ಟೋಪಿ ಹಾಕುವ ಕಂಪನಿಗಳಿಗೆ ಈಗಾಗಲೇ RBI ಮತ್ತು sebi ನಿರ್ಬಂಧ ಹೇರಿವೆ ಆದರೂ ಕೂಡ ಈ ಕಂಪನಿಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಸಾರ್ವಜನಿಕರಿಗೆ ಕೋಟ್ಯಾಂತರ ರೂ. ವಂಚಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗುತ್ತಿದೆ.
ಈ ಘಟನೆ ಕುರಿತು ಅತ್ತಿಬೆಲೆ ಠಾಣೆಯಲ್ಲಿ ಡ್ರೀಮ್ ಟು ಫ್ಲೈ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ. ರಾಯಲ್ ಡ್ರಿಮ್ ಟು ಫ್ಲೈ ಕಂಪನಿ ಸಿ.ಇ.ಒ. ಪ್ರಶಾಂತ ಹಾಗೂ ಇನ್ನಿತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಕೂಲಂಕೂಷ ವಾಗಿ ಪರಿಶೀಲಿಸಿದರೆ ಕೋಟ್ಯಾಂತರ ರೂ.ಗಳ ವಂಚನೆ ಹೊರಬರಲಿದೆ ಎಂದು ಮೂಲಗಳು ತಿಳಿಸಿವೆ.









