ಧಾರವಾಡ : ಎಚ್.ಕೆ. ಪಾಟೀಲ್ ಮುಂಜಾನೆಯಿಂದ ಸಂಜೆವರೆಗೆ ಆರೋಪ ಮಾಡುತ್ತಾನೆ ಇರುತ್ತಾರೆ ಎಂದು ಎಚ್.ಕೆ. ಪಾಟೀಲ್ ಹೇಳಿಕೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಇಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಳಿದಷ್ಟು ವೆಂಟಿಲೇಟರ್ ರಾಜ್ಯಕ್ಕೆ ನೀಡಿಲ್ಲ ಎಂಬ ಎಚ್.ಕೆ. ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಎಚ್.ಕೆ. ಪಾಟೀಲ್ ಮುಂಜಾನೆಯಿಂದ ಸಂಜೆವರೆಗೆ ಆರೋಪ ಮಾಡುತ್ತಾನೆ ಇರುತ್ತಾರೆ ಎಂದು ಸಚಿವ ಜಗದೀಶ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಕೊಟ್ಟಿರುವಷ್ಟು ವೆಂಟಿಲೇಟರ್ ಸಹ ಇನ್ನು ನಾವು ಉಪಯೋಗ ಮಾಡಿಲ್ಲ. ಅದಕ್ಕಾಗಿ ಏನು ವ್ಯವಸ್ಥೆ ಬೇಕು ಅದು ಮಾಡುತ್ತೇವೆ. ಕೊರೊನಾ ಕಾರಣ ಆರ್ಥಿಕ ಮುಗ್ಗಟ್ಟು ಶುರುವಾಗಿದೆ. ಸರ್ಕಾರದ ಆದಾಯಕ್ಕೂ ಮುಗ್ಗಟ್ಟು ಎದುರಾಗಿದೆ. ಹೀಗಾಗಿ ಸಿಆರ್‌ಎಫ್ ಅನುದಾನಗಳು ಬಿಡುಗಡೆಯಾಗಿಲ್ಲ. ಹಿಂದಿನ ಸರ್ಕಾರ ಆರು ತಿಂಗಳು ಪೆಂಡಿಂಗ್ ಇಟ್ಟಿತ್ತು. ಈಗ ಅದರ ಬಗ್ಗೆ ಚಿಂತನೆ ನಡೆದಾಗಲೇ ಕರೊನಾ ಬಂದಿದೆ.
ಇದೆ ವೇಳೆ ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಧಾರವಾಡ ಜಿಲ್ಲೆಯಲ್ಲಿ ಹಬ್ಬುತ್ತಿರುವ ಕೊರೋನಾ ಸೊಂಕು. ಸಾಮುದಾಯಿಕವಾಗಿ ಸೊಂಕು ಹರಡಿಲ್ಲ. ಪಾಸಿಟಿವ್ ಕೇಸಗಳು ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಖಾಸಗಿ ವೈದ್ಯರ ಜೊತೆ ಸಭೆ ಮಾಡಿ, ಕೊರೋನಾ ಚಿಕಿತ್ಸೆ ಕುರಿತು ಚರ್ಚೆ ಮಾಡಿದ್ದೆವೆ.








