ಪಾಕಿಸ್ತಾನ: 70 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಯನ್ನು ಮದುವೆಯಾಗಿರುವ ಘಟನೆ ನಡೆದಿದೆ.
ಪಾಕ್ ನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಲ್ಲಿನ ನಿಯಮದಂತೆ1929 ರ ವಿವಾಹ ತಡೆ ಕಾಯಿದೆಯು ಕನಿಷ್ಟ ಮದುವೆಯ ವಯಸ್ಸನ್ನು ಹುಡುಗಿಯರಿಗೆ 16 ಮತ್ತು ಹುಡುಗರಿಗೆ 18 ಎನ್ನಲಾಗಿದೆ. ಆದರೆ, ಇಲ್ಲಿ ವೃದ್ಧನೊಬ್ಬನಿಗೆ ಬಾಲಕಿಯನ್ನು ಕೊಟ್ಟು ಆಕೆಯ ತಂದೆ ಮದುವೆ ಮಾಡಿದ್ದಾನೆ ಎನ್ನಲಾಗಿದೆ. ಕಾನೂನು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ ಮತ್ತು ಬಾಲಕಿ ತಂದೆ ಇಬ್ಬರನ್ನೂ ಬಂಧಿಸಿದ್ದಾರೆ.
ಈ ಆಘಾತಕಾರಿ ಘಟನೆಗೆ ಪಾಕ್ ಅಷ್ಟೇ ಅಲ್ಲದೇ, ಇಡೀ ವಿಶ್ವದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.