ಬಾಗಲಕೋಟೆ: ಒಂದುವರೆ ತಿಂಗಳ ಮಗುವಿಗೆ ತಂದೆಯೊಬ್ಬರು ತಮ್ಮ ಲೀವರ್ ಕೊಟ್ಟು ಪ್ರಾಣ ಉಳಿಸಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಹುನಗುಂದ(Hunagunda) ಪಟ್ಟಣದ ಮಾಂತೇಶ್ ಮೇಲಿನಮನಿ ಹಾಗೂ ಕಾವೇರಿ ದಂಪತಿಗಳ ಪ್ರೇಕ್ಷಾ ಎಂಬ ಮಗಳಿಗೆ ಲೀವರ್ ನೀಡಲಾಗಿದೆ. ಮಗುವಿಗೆ ಜಾಂಡಿಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಿತ್ತಜನಕಾಂಗದ ಸಮಸ್ಯೆ (Liver Problem) ಇರುವುದು ಕಂಡುಬಂದಿತ್ತು.
ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಾರಾಯಣ ಹೃದಯಾಲಯ(Narayana Hrudayalaya) ಕ್ಕೆ ಭೇಟಿ ನೀಡಿದ್ದರು. ನಾರಾಯಣ ಹೃದಯಾಲಯದ ಸೀನಿಯರ್ ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಕನ್ಸಲ್‌ಟಂಟ್ ಡಾ.ರಾಘವೇಂದ್ರ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
ಚಿಕಿತ್ಸೆ ನೀಡಿದ ವೈದ್ಯರು, ತಂದೆ ಮಾಂತೇಶ್ ಅವರ ಲಿವರ್ ಅನ್ನು ಟ್ರಾನ್ಸ್ ಪ್ಲ್ಯಾಂಟ್ ಮಾಡಿ ಮಗುವಿನ ಜೀವ ಕಾಪಾಡಿದ್ದಾರೆ.
ವಿವಿಧ ಎನ್ ಜಿ ಒ ಗಳ ಆಸರೆ,ನಾರಾಯಸ ಹೃದಯಾಲಯದ ವೈದ್ಯರ ಸಹಕಾರದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.