ಕರಾಚಿ ಸ್ಟಾಕ್ ಎಕ್ಸ್ ಚೇಂಜ್ ದಾಳಿಗೆ ಭಾರತವೇ ಕಾರಣ – ಇಮ್ರಾನ್ ಖಾನ್
ಇಸ್ಲಾಮಾಬಾದ್, ಜುಲೈ 1: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ಕರಾಚಿಯಲ್ಲಿನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದ ಮೇಲೆ ಒಂದು ದಿನದ ಹಿಂದೆ ನಡೆದ ದಾಳಿಗೆ ಭಾರತವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ. ಗ್ರೆನೇಡ್ ಹೊಂದಿದ ನಾಲ್ವರು ಬಂದೂಕುಧಾರಿಗಳು ಸೋಮವಾರ ಪಾಕಿಸ್ತಾನದ ಸ್ಟಾಕ್ ಎಕ್ಸ್ಚೇಂಜ್ ಮೇಲೆ ದಾಳಿ ನಡೆಸಿದರು.
ಭದ್ರತಾ ಪಡೆಗಳು ದಾಳಿಕೋರರನ್ನು ಕೊಲ್ಲುವ ಮೊದಲು ಇಬ್ಬರು ಕಾವಲುಗಾರರು ಮತ್ತು ಪೊಲೀಸರನ್ನು ಕೊಂದರು. ಭಾರತವು ಸೋಮವಾರ ಈ ದಾಳಿಗೆ ಮತ್ತು ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ದಾಳಿಯ ಹಿಂದೆ ಭಾರತವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಎಂದಿರುವ ಇಮ್ರಾನ್ ಖಾನ್ ಸಂಸತ್ತಿನಲ್ಲಿ “ಕಳೆದ ಎರಡು ತಿಂಗಳುಗಳಿಂದ ನನ್ನ ಕ್ಯಾಬಿನೆಟ್ ಗೆ ಈ ದಾಳಿ ಬಗ್ಗೆ ತಿಳಿದಿತ್ತು . ನಾನು ನನ್ನ ಮಂತ್ರಿಗಳಿಗೆ ಮಾಹಿತಿ ನೀಡಿದ್ದೆ. ನಮ್ಮ ಎಲ್ಲಾ ಏಜೆನ್ಸಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದವು ಎಂದು ಅವರು ಹೇಳಿದರು.