ಚಿಕ್ಕಮಗಳೂರು : ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಹೆಮ್ಮಾರಿ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಮಹಾಮಾರಿ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ನೈಟ್ ಕರ್ಫ್ಯೂ ವಿಧಿಸಿದೆ. ರಾತ್ರಿ ವೇಳೆ ಜನರ ಓಡಾಟ, ನೈಟ್ ಪಾರ್ಟಿ ತಡೆಯುವ ಉದ್ದೇಶದಿಂದ ಈ ಕರ್ಫ್ಯೂ ವಿಧಿಸಲಾಗಿದೆ. ಆದ್ರೆ ಕಂದಾಯ ಸಚಿವ ಆರ್. ಅಶೋಕ್ ಅವರೇ ಈ ನೈಟ್ ಕರ್ಫ್ಯೂವನ್ನ ಉಲ್ಲಂಘಿಸಿದ್ದಾರೆ.
ಹೌದು..! ನಿನ್ನೆ ಆರ್ ಅಶೋಕ್ ಅವರ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಕೈಮರ ಸಮೀಪ ಇರುವ ಖಾಸಗಿ ಹೋಟೆಲಿನಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದಾರೆ. ನೈಟ್ ಪಾರ್ಟಿಯಿಂದ ಸೋಂಕು ಹೆಚ್ಚುತ್ತೆ ಅಂದವರೇ ಪಾರ್ಟಿ ಮಾಡಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅಶೋಕ್ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಸಚಿವರ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಪಾರ್ಟಿಯಲ್ಲಿ ಶೆಟ್ಟರ್, ಸಿ.ಟಿ.ರವಿ, ಸತೀಶ್ ರೆಡ್ಡಿ ಸೇರಿ ಹಲವರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.








