ಮಸ್ಕತ್: ಒಮಾನ್ ನ (Oman) ಕರಾವಳಿಯಲ್ಲಿ ತೈಲ ಟ್ಯಾಂಕರ್ (Oil Tanker) ಮುಳುಗಿದ್ದು, ಟ್ಯಾಂಕರ್ ನಲ್ಲಿದ್ದ 13 ಜನ ಭಾರತೀಯ ಸಿಬ್ಬಂದಿ ಸೇರಿದಂತೆ 16 ಜನರು ನಾಪತ್ತೆಯಾಗಿದ್ದಾರೆ.
ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ಬಂದರು ನಗರವಾದ ಏಡೆನ್ ಗೆ ಹೋಗುತ್ತಿತ್ತು. ಈ ಹಡಗಿನಲ್ಲಿ 13 ಜನ ಭಾರತೀಯ (India) ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳು ಇದ್ದರು ಎಂದು ತಿಳಿದು ಬಂದಿದೆ.
ಒಮನ್ ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು, 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಭಾರತೀಯರು ಸೇರಿದಂತೆ ನಾಪತ್ತೆಯಾದ ಎಲ್ಲರನ್ನೂ ರಕ್ಷಿಸುವಂತೆ ಮನವಿ ಮಾಡಲಾಗುತ್ತಿದೆ.








