ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಜೊತೆ ತ್ರಿಷಾ (Trisha) ಅಭಿನಯಿಸಿದ್ದು, ಈ ಸಿನಿಮಾದ ‘ವಿದಾ ಮುಯಾರ್ಚಿ’ (Vidaa Muyarchi) ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
ಸಾಕಷ್ಟು ದಿನಗಳಿಂದ ಅಜಿತ್ ಕುಮಾರ್ ಹೊಸ ಸಿನಿಮಾದಲ್ಲಿ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ, ಈಗ ಅಜಿತ್ ಮತ್ತು ತ್ರಿಷಾ ಜೊತೆಯಾಗಿರುವ ಪೋಸ್ಟರ್ ಹಂಚಿಕೊಂಡು ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿದೆ.
ನಟಿ ತ್ರಿಷಾ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡದ್ದು, ಕಪ್ಪು ಬಣ್ಣದ ಉಡುಗೆಯಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ‘ವಿದಾ ಮುಯಾರ್ಚಿ’ ಸಿನಿಮಾದಲ್ಲಿ ಇಬ್ಬರೂ ದಂಪತಿಗಳಾಗಿ ನಟಿಸಿದ್ದಾರೆ. ಸದ್ಯ ಈ ಪೋಸ್ಟರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡಿದೆ.
ತ್ರಿಷಾ ಕೃಷ್ಣನ್ ಗೆ ಈಗ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಸ್ಟಾರ್ ಸಿನಿಮಾಗಳಲ್ಲಿ ನಟಿಸಲು ತ್ರಿಷಾಗೆ ನಿರ್ಮಾಪಕರು ಮಣೆ ಹಾಕುತ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ.








