ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆದ್ದಿದ್ದು ಪಕ್ಕಾ! 5 ಸಲಿ ಸೋತವನು ಬಿಗ್ ಬಾಸ್ ಸುಲ್ತಾನನಾದ ರೋಚಕ ಕಥೆ!

Karunadu was stunned to see Sudeep's surprise gift for Gilli who won Bigg Boss

Shwetha by Shwetha
January 19, 2026
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

ಕರುನಾಡಿನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿ ತೆರೆಬಿದ್ದಿದೆ. ಕೋಟ್ಯಂತರ ಕನ್ನಡಿಗರ ನಿರೀಕ್ಷೆಯಂತೆಯೇ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದು ಕಾಮಿಡಿ ಕಿಂಗ್ ಗಿಲ್ಲಿ ನಟ. ಹೌದು, ಆರಂಭದಿಂದಲೂ ಈ ಬಾರಿಯ ಕಪ್ ಗಿಲ್ಲಿ ನಟನದ್ದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿತ್ತು. ಇದೀಗ ಆ ಭವಿಷ್ಯ ನಿಜವಾಗಿದ್ದು, ವ್ಯಕ್ತಿತ್ವದ ಈ ಮಹಾ ಸಮರದಲ್ಲಿ ಗಿಲ್ಲಿ ನಟ ಜಯಭೇರಿ ಬಾರಿಸಿದ್ದಾರೆ. ಆದರೆ ಈ ಗೆಲುವಿನ ಸಂಭ್ರಮದ ನಡುವೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು ಕಿಚ್ಚ ಸುದೀಪ್ ಅವರು ನೀಡಿದ ಆ ವಿಶೇಷ ಬಹುಮಾನ!

ಒನ್ ಸೈಡೆಡ್ ಮ್ಯಾಚ್ ಆಡಿದ ಗಿಲ್ಲಿ

Related posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

August 3, 2026
ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

August 3, 2026

ಬಿಗ್ ಬಾಸ್ ಮನೆಯೊಳಗೆ ಕಾವ್ಯ ಜೊತೆ ಜಂಟಿಯಾಗಿ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟ, ಆಟ ಶುರುವಾಗುತ್ತಿದ್ದಂತೆಯೇ ತಮ್ಮ ಪರ್ಫಾರ್ಮೆನ್ಸ್ ಮೂಲಕ ಎಲ್ಲರ ಗಮನ ಸೆಳೆದರು. ಜೋಡಿಯಾಗಿ ಬಂದರೂ ಸಿಂಗಲ್ ಆಗಿಯೇ ಘರ್ಜಿಸಿದರು. ಇಡೀ ಸೀಸನ್ ಅನ್ನು ತಮ್ಮದಾಗಿಸಿಕೊಂಡು ಒನ್ ಸೈಡೆಡ್ ಆಗಿ ಡಾಮಿನೇಟ್ ಮಾಡಿದರು. ಇವರ ಕಾಮಿಡಿ ಟೈಮಿಂಗ್, ಸಮಯ ಪ್ರಜ್ಞೆ ಮತ್ತು ಪಂಚಿಂಗ್ ಡೈಲಾಗ್ಸ್ ವೀಕ್ಷಕರಿಗೆ ಪಕ್ಕಾ ಪೈಸಾ ವಸೂಲ್ ಮನರಂಜನೆ ನೀಡಿತು.

ಅಶ್ಲೀಲತೆ ಇಲ್ಲದ ಸ್ವಚ್ಛ ಹಾಸ್ಯ

ಗಿಲ್ಲಿ ನಟನ ಗೆಲುವಿಗೆ ಪ್ರಮುಖ ಕಾರಣ ಅವರ ಸ್ವಚ್ಛ ಹಾಸ್ಯ. ಎಲ್ಲೂ ಕೂಡ ಡಬಲ್ ಮೀನಿಂಗ್ ಡೈಲಾಗ್ ಬಳಸದೆ, ಅಶ್ಲೀಲತೆಯ ಸೋಂಕಿಲ್ಲದೆ, ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವಂತಹ ಕಾಮಿಡಿ ಮಾಡಿದರು. ಸಿಲ್ಲಿ ಜೋಕ್ಸ್ ಕೂಡ ಗಿಲ್ಲಿ ಎನಿಸುವಂತೆ ಮಾಡಿ ನೋಡುಗರ ಹೊಟ್ಟೆ ಹುಣ್ಣಾಗಿಸಿದರು. ಇದೇ ಕಾರಣಕ್ಕೆ ವೀಕ್ಷಕರು ಗಿಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದರು.

ಸ್ವಯಂಘೋಷಿತ ಪಟ್ಟದಿಂದ ವಿನ್ನರ್ ಪಟ್ಟಕ್ಕೆ

ಮನೆಯೊಳಗೆ ಕೆಲವರು ಗಿಲ್ಲಿ ನಟನನ್ನು ಸ್ವಯಂಘೋಷಿತ ವಿನ್ನರ್ ಎಂದು ವ್ಯಂಗ್ಯವಾಡುತ್ತಿದ್ದರು. ಅಂತಹವರಿಗೆ ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆಲ್ಲೋದು ಪಕ್ಕಾ.. ಟಕರ ಟಕರ ತಮಟೆ ಏಟು.. ಗಿಲ್ಲಿ ನಟ ಅಲ್ಟಿಮೇಟು ಎಂದು ತಮ್ಮದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ದರು. ಇದೀಗ ವೀಕ್ಷಕರು ಅತಿ ಹೆಚ್ಚು ವೋಟ್ ಮಾಡುವ ಮೂಲಕ ಅವರನ್ನು ನಿಜವಾದ ವಿನ್ನರ್ ಮಾಡಿದ್ದಾರೆ.

5 ಬಾರಿ ಸೋತವನಿಗೆ ಒಲಿದ ಮಹಾ ಗೆಲುವು!

ಈ ಹಿಂದೆ ಬರೋಬ್ಬರಿ 5 ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದ ಗಿಲ್ಲಿ ನಟ, ಕೆಲವ್ರಲ್ಲಿ ಫೈನಲಿಸ್ಟ್ ಆದರೆ, ಇನ್ನು ಕೆಲವ್ರಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಗೆಲುವಿನ ರುಚಿ ಕಂಡಿರಲಿಲ್ಲ. ಆದರೆ 5 ಬಾರಿ ಸೋತವನಿಗೆ 6ನೇ ಬಾರಿ ಬಿಗ್ ಬಾಸ್ ಎಂಬ ದೊಡ್ಡ ವೇದಿಕೆ ಅದೃಷ್ಟ ದೇವತೆಯಾಗಿ ಒಲಿದು ಬಂದಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಇದು ವೆಲ್ ಡಿಸರ್ವ್ಡ್ ಗೆಲುವು ಎಂದು ಬೆನ್ನು ತಟ್ಟಿದ್ದಾರೆ.

ಗಿಲ್ಲಿಗೆ ಹರಿದು ಬಂತು ಲಕ್ಷ ಲಕ್ಷ ಹಣ!

ಬಿಗ್ ಬಾಸ್ ಕನ್ನಡ 12ರ ವಿಜೇತ ಪಟ್ಟದೊಂದಿಗೆ ಗಿಲ್ಲಿ ನಟನಿಗೆ ಪ್ರಾಯೋಜಕರ ಕಡೆಯಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇದರ ಜೊತೆಗೆ ಅರಮನೆ ಮಾದರಿಯ ಆಕರ್ಷಕ ಟ್ರೋಫಿ ಹಾಗೂ ಮಾರುತಿ ಸುಜುಕಿ ಕಡೆಯಿಂದ ಐಷಾರಾಮಿ ವಿಕ್ಟೋರಿಸ್ ಕಾರು ಕೂಡ ಉಡುಗೊರೆಯಾಗಿ ಲಭಿಸಿದೆ.

ಕಿಚ್ಚ ಸುದೀಪ್ ಕಡೆಯಿಂದ ಬಿಗ್ ಸರ್ಪ್ರೈಸ್!

ಎಲ್ಲದಕ್ಕಿಂತ ಮುಖ್ಯವಾಗಿ ನಿರೂಪಕ ಕಿಚ್ಚ ಸುದೀಪ್ ಅವರು ಗಿಲ್ಲಿ ನಟನ ಆಟಕ್ಕೆ ಫಿದಾ ಆಗಿದ್ದಾರೆ. ಪ್ರಾಯೋಜಕರ ಬಹುಮಾನದ ಹೊರತಾಗಿ, ವೇದಿಕೆಯ ಮೇಲೆಯೇ ಕಿಚ್ಚ ಸುದೀಪ್ ತಮ್ಮ ವೈಯಕ್ತಿಕ ನೆಲೆಯಲ್ಲಿ ಗಿಲ್ಲಿ ನಟನಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದರು. ಗಿಲ್ಲಿ ಅದ್ಭುತವಾಗಿ ಆಡಿದ್ದಾರೆ, ಅವರಿಗೆ ನನ್ನ ಕಡೆಯಿಂದ ಈ ಪುಟ್ಟ ಕಾಣಿಕೆ ಎಂದು ಸುದೀಪ್ ಹೇಳಿದಾಗ ಇಡೀ ವೇದಿಕೆ ಚಪ್ಪಾಳೆಯಿಂದ ಮೊಳಗಿತು. ಒಟ್ಟಾರೆ 50 ಲಕ್ಷ ಪ್ರೈಜ್ ಮನಿ ಜೊತೆಗೆ ಸುದೀಪ್ ಅವರ 10 ಲಕ್ಷ ಸೇರಿ ಗಿಲ್ಲಿ ನಟ ಜಾಕ್ ಪಾಟ್ ಹೊಡೆದಿದ್ದಾರೆ.

14 ವರ್ಷದ ವನವಾಸ ಅಂತ್ಯ

ಗೆಲುವಿನ ನಂತರ ಮಾತನಾಡಿದ ಗಿಲ್ಲಿ ತಂದೆ, ಬೆಂಗಳೂರಿಗೆ ಬಂದು ತಿನ್ನೋಕೆ ಅನ್ನವಿಲ್ಲದೆ, ಮಲಗೋಕೆ ಜಾಗವಿಲ್ಲದೆ ನನ್ನ ಮಗ ಪರದಾಡಿದ್ದ. 14 ವರ್ಷ ವನವಾಸ ಮಾಡಿ ಶ್ರೀರಾಮ ರಾಜ್ಯ ಕಟ್ಟಿದಂತೆ ನನ್ನ ಮಗ ಇಂದು ಗೆದ್ದು ಬಂದಿದ್ದಾನೆ ಎಂದು ಭಾವುಕರಾದರು. ಒಟ್ಟಿನಲ್ಲಿ ಕಷ್ಟಪಟ್ಟು ಬೆಳೆದ ಕಲಾವಿದನಿಗೆ ಕರುನಾಡು ಕೈಹಿಡಿದು ನಡೆಸಿದೆ.

ShareTweetSendShare
Join us on:

Related Posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

by Shwetha
August 3, 2026
0

ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು...

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

by Shwetha
August 3, 2026
0

ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ...

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

by Shwetha
August 3, 2026
0

ಭ್ರಷ್ಟತೆಯಿಂದ ಕೂಡಿದ ಪರೀಕ್ಷಾ ವ್ಯವಸ್ಥೆಯನ್ನು ದೇಶದ ಯುವಜನತೆಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕೇ ಹೊರತು ಅವರಿಗೆ ಕ್ಷಮಾದಾನ ನೀಡುವುದಲ್ಲ ಎಂದು ಕಾಂಗ್ರೆಸ್...

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

by Shwetha
August 3, 2026
0

ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಐದು ವರ್ಷಗಳ ಒಳಗಾಗಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರವೇ ವಾಪಸ್ ಪಡೆಯುವುದು ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram