ಬಾಲಿವುಡ್ ನಟ ಸಂಜಯ್ ದತ್ 65ನೇ ಹುಟ್ಟುಹಬ್ಬವನ್ನು ಸೋಮವಾರವಷ್ಟೇ ಆಚರಿಸಿಕೊಂಡಿದ್ದಾರೆ. ಈ ವೇಳೆ ನಟ ಸಂಜಯ್ ದತ್ ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ರೇಂಜ್ ರೋವರ್ ಎಸ್ ವಿ ಲಗ್ಷುರಿ ಎಸ್ ಯುವಿ ಖರೀದಿಸಿದ್ದಾರೆ.
ಸಂಜಯ್ ದತ್ ಖರೀದಿ ಮಾಡಿರುವ ಕಸ್ಟಮೈಜ್ಡ್ ಸೌಲಭ್ಯದ ರೇಂಜ್ ರೋವರ್ ಎಸ್ ವಿ ಲಗ್ಷುರಿ ಎಸ್ ಯುವಿ ಆವೃತ್ತಿಯು ಹಲವಾರು ವಿಶೇಷತೆಗಳೊಂದಿಗೆ ನಿರ್ಮಾಣಗೊಂಡಿದೆ. ಸುಮಾರು ರೂ. 4.50 ಕೋಟಿ ಮೌಲ್ಯ ಹೊಂದಿದೆ ಎನ್ನಲಾಗಿದೆ. ಹೊಸ ಕಾರನ್ನು ವಿಶೇಷವಾಗಿ ಅಲ್ಟ್ರಾ ಮ್ಯಾಟಿಕ್ ಗ್ರೀನ್ ಬಣ್ಣದೊಂದಿಗೆ ಅಭಿವೃದ್ದಿಪಡಿಸಲಾಗಿದ್ದು, ಇದು ರೇಂಜ್ ರೋವರ್ ಕಂಪನಿಯ ಸೆರೆನಿಟಿ ಕಸ್ಟಮೈಜ್ಡ್ ಪ್ಯಾಕೇಜ್ ನೊಂದಿಗೆ ಹಲವಾರು ಬದಲಾವಣೆ ಹೊಂದಿದೆ.
ರೇಂಜ್ ರೋವರ್ ನಿರ್ಮಾಣದ ಕಾರುಗಳಲ್ಲಿಯೇ ರೇಂಜ್ ರೋವರ್ ಎಸ್ ವಿ ಆವೃತ್ತಿಯು ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಸಂಜಯ್ ದತ್ ಖರೀದಿ ಮಾಡಿರುವ ಆವೃತ್ತಿಯಲ್ಲಿ ಮತ್ತಷ್ಟು ಹೊಸ ಐಷಾರಾಮಿ ಫೀಚರ್ಸ್ ಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡಲಾಗಿದೆ.
ಬಾಲಿವುಡ್ ನಲ್ಲಿ ಮಾತ್ರ ದಕ್ಷಿಣ ಭಾರತದ ಚಿತ್ರಗಳಲ್ಲೂ ಮಿಂಚುತ್ತಿರುವ ನಟ ಸಂಜಯ್ ದತ್ ದೊಡ್ಡ ಮೊತ್ತದ ಸಂಭಾವಣೆ ಪಡೆಯುತ್ತಿದ್ದು, ಇವರ ಬಳಿ ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ಸಂಗ್ರಹವಿದೆ.








