ಕೆಲವರಿಗೆ ಅಕ್ರಮ ಸಂಬಂಧ ಚಟವಾಗಿದೆ ಎಂದು ಖಳ ನಟ ಅರ್ಜುನ್ ರಾಂಪಾಲ್ (Arjun Rampal) ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಲವ್, ಮ್ಯಾರೇಜ್, ಲಿವ್ ಇನ್ ರಿಲೇಷನ್ ಶಿಪ್ ಕುರಿತು ಮಾತನಾಡಿರುವ ಅವರು, ನಾನು ಸೆಕ್ಸ್ ನ್ನು ಪ್ರೀತಿಸುತ್ತೇನೆ. ಲೈಂಗಿಕತೆಯು ಜೀವನದ ಪ್ರಮುಖ ಭಾಗವಾಗಿದೆ. ಆದರೆ, ಅದು ಒಬ್ಬ ಸಂಗಾತಿಯೊಂದಿಗೆ ಇರಬೇಕು ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಸಂಗಾತಿಯ ಜೊತೆ ಹಾಸಿಗೆ ಹಂಚಿಕೊಳ್ಳುವಾಗ ಸೆಕ್ಸ್ ನಲ್ಲಿ ಒಂದು ರೀತಿಯ ಶಕ್ತಿ ಅಡಗಿದೆ ಅಂತ ಅನಿಸುತ್ತದೆ. ಲೈಂಗಿಕ ಕ್ರಿಯೆಯಲ್ಲಿ ದೊಡ್ಡ ಶಕ್ತಿ ವಿನಿಮಯವಾಗುತ್ತದೆ. ಆ ಕ್ಷಣಕ್ಕೆ ಅದು ನಮಗೆ ಗೊತ್ತಿರಲ್ಲ. ಹೀಗಾಗಿ ಲೈಂಗಿಕ ಶಕ್ತಿ ಎಲ್ಲರಿಗೂ ಬೇಕು. ಆದರೆ, ಮದುವೆಯಾದರೂ ಬೇರೆಯವರೊಂದಿಗೆ ಸಂಬಂಧಕ್ಕೆ ಹಲವರು ಹಾತೊರೆಯುತ್ತಿರುತ್ತಾರೆ. ಅದು ಅವರ ಚಟ ಎಂದು ಹೇಳಿದ್ದಾರೆ.
ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ. ಅದು ಹೇಗೆ ಅವರದ್ದು ಸುಖಿ ದಾಂಪತ್ಯವಾಗುತ್ತೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ವಿವಾಹೇತರ ಸಂಬಂಧ ಚಟವಾದರೂ ಅದು ಯಾವತ್ತು ಒಳ್ಳೆಯದಲ್ಲ ಎಂದು ನಹೇಳಿದ್ದಾರೆ.