ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪುಂಡರ ಅಟ್ಟಹಾಸ ಹೆಚ್ಚಾಗಿದೆ. ಬೆಂಗಳೂರು ನಗರ ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಂಡರೂ ಪುಂಡರು ಮಾತ್ರ ತಮ್ಮ ಕೆಲವು ಕೆಟ್ಟ ಚಟಗಳನ್ನು ಬಿಡುತ್ತಿಲ್ಲ. ಜನರಿಗೆ ಕಿರಿ ಕಿರಿ ಮಾಡುವುದು, ಅಸಭ್ಯ ವರ್ತನೆ ಮಾಡೋದು ನಿಲ್ಲಿಸುತ್ತಿಲ್ಲ. ನಗರದಲ್ಲಿ ಮತ್ತೊಂದು ಇಂತಹ ಘಟನೆ ಬೆಳಕಿಗೆ ಬಂದಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಜಿ ರಸ್ತೆ ಹತ್ತಿರ ಯುವಕರು ಬೈಕ್ ನಲ್ಲಿಯೇ ಎಣ್ಣೆ ಹೊಡೆಯುತ್ತ ತ್ರಿಬಲ್ ರೈಡ್ಸ್ ಹೋಗಿದ್ದಾರೆ. ಚಲಿಸುವ ಬೈಕ್ ನಲ್ಲಿಯೇ ಓರ್ವ ಮದ್ಯ ಇರುವ ಗ್ಲಾಸ್ ಮತ್ತೊಬ್ಬ ಬಿಯರ್ ಬಾಟಲ್ ಹಿಡಿದು ಮದ್ಯ ಸೇವಿಸಿದ್ದಾರೆ. ಯುವಕರು ಕುಡಿದ ನಶೆಯಲ್ಲಿ ಹಲ್ಮೇಟ್ ಹಾಕದೆ, ತ್ರಿಬಲ್ ರೈಡ್ಸ್ ಹೋಗಿದ್ದಾರೆ. ಅಲ್ಲದೇ, ರಸ್ತೆಯಲ್ಲಿ ಬೈಕ್ ನ್ನು ಅಡ್ಡಾ ದಿಡ್ಡಿಯಾಗಿ ಚಲಾಯಿಸಿದ್ದಾರೆ. ಇದನ್ನು ಹಿಂದೆ ಹೊರಟಿದ್ದ ಕಾರನಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.