ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ (Pavithra Gowda) ಸೇರಿದಂತೆ ಒಟ್ಟು 17 ಜನ ಆರೋಪಿಗಳಾಗಿ ಜೈಲು ಸೇರಿದ್ದಾರೆ. ಈಗ ಪವಿತ್ರಾಗೌಡ ಮಗಳು ತಾಯಿ ನೆನೆದು ಪೋಸ್ಟ್ ಮಾಡಿದ್ದಾರೆ.
ಖುಷಿ ಗೌಡ (Kushi Gowda) ಆಗಾಗ ತಾಯಿ ಕಾಣಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿರುತ್ತಾರೆ. ಈಗ ಅಮ್ಮನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮ್ಮ ನನ್ನ ಪ್ರೇರಣೆ, ಪರಿಸ್ಥಿತಿ ಎಷ್ಟೇ ಇದ್ದರೂ ಹೇಗೆ ಗಟ್ಟಿಯಾಗಿರಬೇಕೆಂದು ಕಲಿಸುತ್ತಾರೆ. ಅವರು ಯಾವಾಗಲೂ ತುಂಬಾ ಮುಕ್ತ ಮತ್ತು ಬೆಂಬಲ ನೀಡುತ್ತಾರೆ. ಅವರು ಶತಕೋಟಿಯಲ್ಲಿ ಒಬ್ಬರು. ಅವರಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ. ಮತ್ತು ಅದೃಷ್ಟಶಾಲಿಯಾಗಿದ್ದೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ ಎಂದು ಬರೆದುಕೊಂಡಿದ್ದಾರೆ. ಅಮ್ಮ ನಡೆಸಿಕೊಂಡು ಹೋಗುತ್ತಿದ್ದ ‘ಫ್ಯಾಷನ್ ಬೋಟಿಕ್’ ನ್ನು ಈಗ ಮಗಳು ಖುಷಿ ನಡೆಸುತ್ತಿದ್ದಾಳೆ.