ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಏರ್ ಫೋರ್ಸ್-1 ವಿಮಾನದಲ್ಲಿ ಬಂದಿಳಿದ ಟ್ರಂಪ್, ಅವರ ಪತ್ನಿ ಮೆಲಾನಿಯ ಮತ್ತು ಮಗಳು ಇವಾಂಕಾ ಟ್ರಂಪ್ ಅವರನ್ನ ಪ್ರಧಾನಿ ಮೋದಿ ಆಹ್ವಾನಿಸಿದರು. ಟ್ರಂಪ್ ಮತ್ತು ಮೋದಿ ಪರಸ್ಪರ ತಬ್ಬಿಕೊಳ್ಳುವ ಮೂಲಕ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ ಸಾಂಪ್ರದಾಯಿಕ ರೀತಿಯಲ್ಲಿ ಟ್ರಂಪ್ ಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಜಾನಪದ ನೃತ್ಯ, ವಾದ್ಯಮೇಳಗಳು ಮೊಳಗಿದವು. ನಂತರ ವಿಮಾನ ನಿಲ್ದಾಣದಿಂದ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಸಬರಮತಿ ಅಶ್ರಮದತ್ತ ಕಾರ್ ಗಳಲ್ಲಿ ಹೊರಟಿದ್ದಾರೆ.
ನಾವು ಯಾರು ನಮ್ಮ ಸಂಸ್ಕೃತಿ ಯಾವುದು ಅಂತ ತಾಯಿ ತಿಳಿಸ್ತಾರೆ- ಯತೀಂದ್ರ ಮೊದಲು ತಮ್ಮ ತಾಯಿ ಬಳಿ ಧರ್ಮದ ಬಗ್ಗೆ ಕೇಳಲಿ: ಯತೀಂದ್ರಗೆ ಶೋಭಾ ಟಾಂಗ್
ಬೆಂಗಳೂರು: ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಅವರು ಈ ದೇಶದ...








