ಬಳ್ಳಾರಿ: ತುಂಗಭದ್ರಾ ಡ್ಯಾಂನ 19ನೇ ತೂಬಿನಲ್ಲಿ ಗೇಟ್ ಅಳವಡಿಸುವ ಮೊದಲ ಪ್ರಯತ್ನ ವಿಫಲವಾಗಿದೆ. ಈಗ ಮತ್ತೊಂದು ಪ್ರಯತ್ನಕ್ಕೆ ಅಧಿಕಾರಿಗಳು ಹಾಗೂ ತಜ್ಞರು ಮುಂದಾಗಿದ್ದಾರೆ.
ಮೊದಲ ಪ್ರಯತ್ನದಲ್ಲಿ ಜಿಂದಾಲ್ ಕಂಪನಿಯ ಗೇಟ್ ಎಲಿಮೆಂಟ್‌ನ ಕೊಂಡಿಗಳು 19ನೇ ತೂಬಿನ ಕಲ್ಲಿನ ಪಿಲ್ಲರ್‌ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ವಿಫಲಲಾಗಿದೆ. ಹೊಸಳ್ಳಿಯಲ್ಲಿ ಸಿದ್ಧಪಡಿಸಲಾದ ಗೇಟ್ ಎಲಿಮೆಂಟ್ ತಂದಿರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1,625 ಅಡಿ ಎತ್ತರದಲ್ಲಿ ಡ್ಯಾಂ ನೀರು ಇರುವಾಗ ಸ್ಟಾಪ್ ಲಾಗ್ ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ತಾಂತ್ರಿಕ ತೊಂದರೆಯಿಂದಾಗಿ ನಿನ್ನೆ ಸ್ಪಾಪ್ ಲಾಗ್‌ನ ಒಂದು ಎಲಿಮೆಂಟ್ ಅಳವಡಿಸಲು ಆಗಲಿಲ್ಲ. 1,621 ಅಡಿಗೆ ನೀರಿನ ಮಟ್ಟ ಬಂದಾಗ ಸ್ಟಾಪ್ ಲಾಗ್ ಅಳವಡಿಸಲು ಚಿಂತನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲು ಎರಡು ಹಂತದಲ್ಲಿ ಪ್ರಯತ್ನಿಸಲು ತಜ್ಞರು ಚಿಂತಿಸಿದ್ದರು. ಟಿಬಿ ಬೋರ್ಡ್‌ನಿಂದ ಸಿಎಂಗೆ ನೀಡಿದ ಮಾಹಿತಿಯಲ್ಲಿ ನಮೂದಿಸಲಾಗಿದೆ. ಇಂದು ಮತ್ತೆ ಗೇಟ್ ಅಳವಡಿಕೆ ಯತ್ನ ನಡೆಸುವ ಸಾಧ್ಯತೆ ಕೂಡ ಮತ್ತೆ ಇದೆ.








