ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics) ಬೆಳ್ಳಿ ಪದಕ ಗೆದ್ದಿರುವ ಭಾರತದ ನೀರಜ್ ಚೋಪ್ರಾ (Neeraj Chopra) ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನ ಪಡೆಯುವುದರ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ಸ್ವಿಜ್ಜರ್‌ಲ್ಯಾಂಡ್‌ನ ಲೌಸನ್ನೆ ಡೈಮಂಡ್ ಲೀಗ್ (Lausanne Diamond League) 2024 ರಲ್ಲಿ ಜಾವೆಲಿನ್ ಎಸೆತ (Javelin Throw)ಸ್ಪರ್ಧೆಯಲ್ಲಿ 89.49ಮೀ. ಎಸೆಯುವ ಮೂಲಕ ಸೀಸನ್‌ನ ಅತ್ಯುತ್ತಮ ಎಸೆತ ಎಸೆದಿದ್ದಾರೆ.
ಗ್ರೇನಡಾದ ಆಂಡರ್ಸನ್ ಪೀಟರ್ಸ್ (Anderson Peters) 90.61ಮೀ., ನೀರಜ್ ಚೋಪ್ರಾ 89.49ಮೀ., ಹಾಗೂ ಜರ್ಮನಿಯ ಜೂಲಿಯಸ್ ವೇಬರ್ 87.08ಮೀ. ಎಸೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಚೋಪ್ರಾ ಮೊದಲ ಪ್ರಯತ್ನದಲ್ಲಿ 82.10ಮೀ. ದೂರ ಎಸೆದರು. ತಮ್ಮ ಮೊದಲ ನಾಲ್ಕು ಪ್ರಯತ್ನದವರೆಗೂ ಚೋಪ್ರಾ ಮೊದಲ ಮೂರು ಸ್ಥಾನಗಳಿಂದ ಹೊರಗುಳಿದ್ದರು. ನಂತರ ಕೊನೆಯ ಪ್ರಯತ್ನದಲ್ಲಿ ಪೀಟರ್ಸ್ 90.61 ಮೀ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು.
ಚೋಪ್ರಾ ತನ್ನ ಐದನೇ ಪ್ರಯತ್ನದಲ್ಲಿ 85.58ಮೀ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ಬಂದರು. ನಂತರ ಕೊನೆಯ ಪ್ರಯತ್ನದಲ್ಲಿ 89.49ಮೀ ಎಸೆಯುವ ಮೂಲಕ ಸೀಸನ್‌ನ ಎರಡನೇ ಸ್ಥಾನ ಪಡೆದರು. ಈ ಮೂಲಕ ಚೋಪ್ರಾ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಫೈನಲ್ ನಲ್ಲಿ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಇವೆಂಟ್ ನ ಫೈನಲ್ ನಲ್ಲಿ ಅಗ್ರ ಆರು ಸ್ಥಾನ ಪಡೆದವರು ಸೆಣಸಾಟ ನಡೆಸಲಿದ್ದಾರೆ.








