ನಟಿ ರೇಖಾ ನಾಯರ್ (Rekha Nair) ಕಾರು ಅಪಘಾತವಾಗಿದ್ದು, 55 ವಯಸ್ಸಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚೆನ್ನೈನ ಜಾಫರ್ ಖಾನ್ ಪೇಟೆಯ ಅಣ್ಣಿ ಸತ್ಯನಗರದಲ್ಲಿ ಈ ಘಟನೆ ನಡೆದಿದೆ. ಮಂಜನ್ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಟಿ ರೇಖಾ ನಾಯರ್ ಅವರ ಡ್ರೈವರ್ ಕಾರನ್ನು ಪ್ರಯಾಣಿಕನ ಎದೆಯ ಮೇಲೆಯೇ ಹಾಯಿಸಿದ್ದಾರೆ. ಪರಿಣಾಮ ಆ ವ್ಯಕ್ತಿ ರಸ್ತೆಯಲ್ಲಿಯೇ ಬಿದ್ದಿದ್ದಾನೆ. ಆದರೆ, ಚಾಲಕ ಕಾರು ನಿಲ್ಲಿಸದೇ ಹಾಗೇ ಹೋಗಿದ್ದಾನೆ. ಸ್ಥಳಿಯರು ಗಾಯಗೊಂಡ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಬಂಧಿಸಿದಂತೆ ನಟಿ ರೇಖಾ ನಾಯರ್ ಕಾರಿನ ಚಾಲಕನನ್ನು ಚೆನ್ನೈನ ಎಂಜಿಆರ್ ನಗರದ ಪೊಲೀಸರು ಬಂಧಿಸಿದ್ದಾರೆ. ಆದರೆ, ಘಟನೆಯ ವೇಳೆ ರೇಖಾ ನಾಯರ್ ವಾಹನದಲ್ಲಿದ್ದರೇ ಎಂಬುವುದು ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







