ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

admin by admin
October 5, 2026
in Cinema, Newsbeat, ನ್ಯೂಸ್ ಬೀಟ್, ಮನರಂಜನೆ
devi-mahatme-social-drama-rangayana-raghu-december-4-release

devi-mahatme-social-drama-rangayana-raghu-december-4-release

Share on FacebookShare on TwitterShare on WhatsappShare on Telegram

ಬೆಂಗಳೂರು: ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಾಯಾಜಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರವು ಯಾವುದೇ ಪೌರಾಣಿಕ ಅಥವಾ ಭಕ್ತಿ ಪ್ರಧಾನ ಸಿನಿಮಾವಲ್ಲ, ಬದಲಿಗೆ ಇಂದಿನ ಸಮಾಜದ ಮೌಲ್ಯಗಳನ್ನು ಕಟ್ಟಿಕೊಡುವ ಒಂದು ವಿಭಿನ್ನ ಸೋಷಿಯಲ್ ಡ್ರಾಮಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ.‌ ಈ ಚಿತ್ರವು ಡಿಸೆಂಬರ್‌ 4ರಂದು ತೆರೆಗೆ ಬರಲಿದೆ.

ಶೀರ್ಷಿಕೆಯ ಆಯ್ಕೆಯ ಕುರಿತು ಮಾತನಾಡಿರುವ ಅವರು, “ಶೀರ್ಷಿಕೆ ಕೇಳಿದ ತಕ್ಷಣ ಎಲ್ಲರೂ ಇದೊಂದು ದೇವರ ಸಿನಿಮಾ ಎಂದು ಭಾವಿಸಿದ್ದರು. ಆದರೆ ಇದು ಪಕ್ಕಾ ಸೋಷಿಯಲ್ ಡ್ರಾಮಾ. ನಮ್ಮ ಊರಾದ ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ‘ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗ ಮತ್ತು ಬಯಲಾಟ ಅತ್ಯಂತ ಪ್ರಸಿದ್ಧ. ಚಿತ್ರದ ಕಥೆಗೂ ಹಾಗೂ ಆ ಪ್ರಸಂಗಕ್ಕೂ ನೇರ ನಂಟಿರುವುದರಿಂದ, ಜೊತೆಗೆ ಚಿತ್ರದಲ್ಲಿ ಅದರ ಕೆಲವು ತುಣುಕುಗಳು ಇರುವುದರಿಂದ ಈ ಶೀರ್ಷಿಕೆಯನ್ನು ಇಡಲಾಗಿದೆ. ಪ್ರೇಕ್ಷಕರಿಗೆ ಕಥೆ ಸಾಗುತ್ತಾ ಇದು ಯಾಕೆ ‘ದೇವಿ ಮಹಾತ್ಮೆ’ ಎಂಬುದು ಆಪ್ತವಾಗಿ ಕನೆಕ್ಟ್ ಆಗುತ್ತದೆ” ಎಂದಿದ್ದಾರೆ.

Related posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

October 5, 2026
my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

October 5, 2026

ಚಿತ್ರದಲ್ಲಿ ಹಿರಿಯ ನಟ ರಂಗಾಯಣ ರಘು ಅವರದ್ದು ಅತ್ಯಂತ ತೂಕದ ಮತ್ತು ಈವರೆಗೆ ಕಾಣಿಸದ ವಿಶಿಷ್ಟ ಪಾತ್ರ ಎಂದು ನಿರ್ದೇಶಕರು ವಿವರಿಸಿದ್ದಾರೆ. “ರಂಗಾಯಣ ರಘು ಅವರು ಈ ಚಿತ್ರದಲ್ಲಿ ಯಾವುದೇ ಅಬ್ಬರ, ಆಕ್ರೋಶವಿಲ್ಲದ ಅತ್ಯಂತ ಸಟಲ್ ಅಭಿನಯ ನೀಡಿದ್ದಾರೆ. ಒಬ್ಬ ತಂದೆಯಾಗಿ, ಮನುಷ್ಯ ಮನುಷ್ಯನಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಅವರ ಪಾತ್ರದ ಪ್ರತಿ ಫ್ರೇಮ್‌ನಲ್ಲೂ ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಚಿತ್ರದಲ್ಲಿ ಬಹುತೇಕ ರಂಗಭೂಮಿ ಪ್ರತಿಭೆಗಳೇ ನಟಿಸಿದ್ದು, ಪ್ರಶಾಂತ್ ಹಿರೇಮಠ್ ಮೈಸೂರು, ಪಿ.ಡಿ. ಸತೀಶ್, ಅರವಿಂದ್ ಕುಪ್ಳೀಕರ್, ಬಾಸುಮ ಕೊಡಗು, ರಘು ಪಾಂಡೇಶ್ವರ್‌, ಶ್ವೇತಾ ಶ್ರೀನಿವಾಸ್‌, ಮೋಹನ್‌ ಶಣೈ, ಆಸೀಫ್‌ ಕ್ಷತ್ರೀಯಾ ಹಾಗೂ ಪ್ರತಿಮಾ ನಾಯ್ಕ್ ಸೇರಿದಂತೆ ಹಲವು ಕಲಾವಿದರು ಚಿತ್ರದ ಗಟ್ಟಿತನವನ್ನು ಹೆಚ್ಚಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಚಿತ್ರದ ನಿರೂಪಣೆ ಯಾವುದೇ ರೆಗ್ಯುಲರ್ ಟೆಂಪ್ಲೇಟ್‌ನಲ್ಲಿ ಇರುವುದಿಲ್ಲ ಎಂದಿರುವ ನಾಗರಾಜ್‌ ಸೋಮಾಯಾಜಿ, “ಫ್ಲ್ಯಾಶ್‌ಬ್ಯಾಕ್ ಸೇರಿದಂತೆ ಎಲ್ಲವನ್ನೂ ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಟೀಸರ್‌ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯ ನಂತರ, ಕಥೆಯ ಮೂಲ ತಿರುಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ” ಎಂದಿದ್ದಾರೆ. ಮೂಲತಃ ತಮಿಳುನಾಡಿನವರಾದ ಗಾಂಧಿರಾಜನ್ ಅವರು ಕನ್ನಡ ಭಾಷೆ ಹಾಗೂ ತಂಡದ ಮೇಲಿನ ವಿಶ್ವಾಸದಿಂದ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಸ್.ಕೆ. ರಾವ್ ಛಾಯಾಗ್ರಹಣವಿದ್ದು, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಸಂಗೀತವೇ ಈ ಚಿತ್ರದ ಮತ್ತೊಂದು ಮುಖ್ಯ ಪಾತ್ರದಂತೆ ಕೆಲಸ ಮಾಡಿದೆ ಎಂದು ತಂಡ ಹೇಳಿಕೊಂಡಿದೆ.

ಈಗಾಗಲೇ ಎಲ್ಲ ಹಂತದ ಕೆಲಸಗಳನ್ನು ಮುಗಿಸಿಕೊಂಡಿರುವ ‘ದೇವಿ ಮಹಾತ್ಮೆ’ ಚಿತ್ರವು ಇದೇ ಡಿಸೆಂಬರ್ 4 ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದ್ದು, ‘ಜನನಿ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ShareTweetSendShare
Join us on:

Related Posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

by admin
October 5, 2026
0

lakshmiputra-chikkanna-amman-song-tara-emotional-november-27-release ಬೆಂಗಳೂರು: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ...

my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

by admin
October 5, 2026
0

ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ ಕಥೆ ಬೆಂಗಳೂರು: ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ...

sanvi-sudeep-sulochana-song-sigma-jason-sanjay-thaman

ಮಸ್ತ್‌ ಮಲೈಕಾ’ ಯಶಸ್ಸಿನ ಬಳಿಕ ಗಾಯಕಿ ಸಾನ್ವಿ ಸುದೀಪ್‌ ಅವರು ‘ಸುಲೋಚನ’ ಎಂಬ ಹೊಸ ಗೀತೆಗೆ ಧ್ವನಿಯಾಗಿದ್ದಾರೆ.

by admin
October 5, 2026
0

ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡುತ್ತಿರುವ 'ಸಿಗ್ಮಾ' ಚಿತ್ರದಲ್ಲಿ ಈ ಹಾಡು ಮೂಡಿಬಂದಿದೆ. 'ಸಿಗ್ಮಾ' ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ...

puttamalli-song-anna-from-mexico-dhananjaya-5-million-views

ಸೋಶಿಯಲ್‌ ಮೀಡಿಯಾದಲ್ಲಿ ‘ಪುಟ್ಟಮಲ್ಲಿ’ ಧಮಾಕ: ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!

by admin
October 5, 2026
0

ಬೆಂಗಳೂರು: ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ...

slum-dog-33-temple-road-vijay-sethupathi-zareena-wahab-jubeida-glimpse

ಪೂರಿ ಜಗನ್ನಾಥ್–ವಿಜಯ್ ಸೇತುಪತಿ ಕಾಂಬಿನೇಷನ್‌ನ ‘ಸ್ಲಮ್ ಡಾಗ್’ ಚಿತ್ರದಿಂದ ಎಮೋಷನಲ್ ಗ್ಲಿಂಪ್ಸ್ ರಿಲೀಸ್: ‘ಜುಬೇದಾ’ ಪಾತ್ರದಲ್ಲಿ ಹಿರಿಯ ನಟಿ ಝರೀನಾ ವಹಾಬ್!

by admin
October 5, 2026
0

ಹೈದರಾಬಾದ್: ಡೈನಾಮಿಕ್ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ವಿಶಿಷ್ಟ ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram