ವಾಷಿಂಗ್ಟನ್: ಭಾರತೀಯ ಮೂಲದ (Indian Origin Man) ದರೋಡೆಕೋರ ಅಮೆರಿಕದಲ್ಲಿ ನೇಪಾಳ ಮೂಲದ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಅಪಾರ್ಟ್ ಮೆಂಟ್ ನಲ್ಲಿ ದರೋಡೆ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಅಮೆರಿಕದಲ್ಲಿ (America) ನಡೆದಿದೆ.
ನೇಪಾಳ (Nepal Student) ಮೂಲದ 21 ವರ್ಷದ ವಿದ್ಯಾರ್ಥಿನಿ ಮುನಾ ಪಾಂಡೆ ಹತ್ಯೆಯಾಗಿದ್ದಾಳೆ. 52 ವರ್ಷದ ಬಾಬಿ ಸಿನ್ಹ್ ಶಾ ಕೊಲೆ ಮಾಡಿರುವ ಆರೋಪಿ. ಮುನಾ ಪಾಂಡೆ ತನ್ನ ಹೂಸ್ಟನ್ ಅಪಾರ್ಟ್‌ಮೆಂಟ್ ನಲ್ಲಿ ಇದ್ದ ವೇಳೆ ಗುಂಡಿಗೆ ಬಲಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಮಾಡಿದ ನಂತರ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿರುವ ಪಾಂಡೆ 2021 ರಲ್ಲಿ ನೇಪಾಳದಿಂದ ಹೂಸ್ಟನ್ ಸಮುದಾಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಯುವತಿಯ ತಾಯಿ ಕೂಡ ಮಗಳೊಂದಿಗೆ ಇರಲು ಆಗಮಿಸಿದ್ದರು. ಇದಕ್ಕಾಗಿ ಅವರ ಸಮುದಾಯದವರು ಹಣ ಕೂಡಿಸಿ ಕೊಟ್ಟು ಕಳುಹಿಸಿದ್ದರು. ಆದರೆ, ಈಗ ಈ ದುರ್ಘಟನೆಗೆ ಇಡೀ ನೇಪಾಳ ಮರಗುತ್ತಿದೆ.








