ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಲು ಯಾರೂ ಉಳಿದಿಲ್ಲ – ಹುಲಾ ಪಾಂಡೆ ಲೇವಡಿ
ಬಿಹಾರ, ಜುಲೈ 5: ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ಉಪಾಧ್ಯಕ್ಷ ಹುಲಾ ಪಾಂಡೆ ಶನಿವಾರ ಬಿಹಾರದಲ್ಲಿ ಸರ್ಕಾರ ರಚಿಸುವ ಸಲುವಾಗಿ ಎಲ್ಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಬಯಸುತ್ತಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಪಕ್ಷಕ್ಕೆ ಸಹಾಯ ಮಾಡಲು ರಾಜ್ಯದಲ್ಲಿ ಯಾರೂ ಉಳಿದಿಲ್ಲ ಎಂದು ಅವರು ಕಾಂಗ್ರೆಸ್ ಅನ್ನು ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹುಲಾ ಪಾಂಡೆ, ನಾವು ನಮ್ಮೊಡನೆ ಇರುವವರ ಜೊತೆಗೆ ಸರ್ಕಾರ ರಚನೆ ಮಾಡುವುದನ್ನು ಎದುರು ನೋಡುತ್ತಿದ್ದೇವೆ ಈಗ ಕಾಂಗ್ರೆಸ್ಸಿಗೆ ಸಹಾಯ ಮಾಡಲು ಯಾರೂ ಉಳಿದಿಲ್ಲ. ಆದ್ದರಿಂದ, ಅವರು ಬಹುಶಃ ರಾಮ್ ವಿಲಾಸ್ ಜಿ ( ಎಲ್ಜೆಪಿ ಮುಖ್ಯಸ್ಥ) ಅವರೊಂದಿಗೆ ಸೇರಿಕೊಂಡು ಸರ್ಕಾರ ರಚಿಸ ಬಹುದು ಎಂದು ಯೋಚಿಸುತ್ತಿದ್ದಾರೆ . ಇದು ಕೇವಲ ಅವರ ಹಗಲುಗನಸು ಅಷ್ಟೇ ಎಂದು ಹುಲಾ ಪಾಂಡೆ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣೆಗೆ ಮುನ್ನ ಬಿಹಾರ ಕಾಂಗ್ರೆಸ್ ಮುಖಂಡರೊಂದಿಗೆ ವರ್ಚುವಲ್ ಸಭೆ ನಡೆಸಿದ ಒಂದು ದಿನದ ನಂತರ ಪಾಂಡೆ ಅವರ ಈ ಹೇಳಿಕೆಗಳು ಬಂದಿವೆ. ಸಭೆಯಲ್ಲಿ ಹಾಜರಿದ್ದ ಮೂಲಗಳ ಪ್ರಕಾರ, ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತಮ್ಮ ಪೂರ್ಣ ಸಮಯವನ್ನು ನೀಡುವುದಾಗಿ ರಾಹುಲ್ ಗಾಂಧಿ ಪಕ್ಷದ ಮುಖಂಡರಿಗೆ ಭರವಸೆ ನೀಡಿದ್ದು, ಸೀಟ್ ಹಂಚಿಕೆ ಸೂತ್ರವನ್ನು ನಂತರ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ








