ಬೆಂಗಳೂರು: ಮರವೊಂದು ಕಾರುಗಳ ಮೇಲೆಯೇ ಬಿದ್ದ ಪರಿಣಾಮ ಕಾರಿನಲ್ಲಿದ್ದವರು ಸಿಲುಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ (M.Chinnaswamy Stadium) ಹತ್ತಿರ ಈ ಘಟನೆ ನಡೆದಿದೆ. ನಿನ್ನೆ (ಸೆ.1) ಸಂಜೆ ಒಣಗಿದ ಬೃಹತ್ ಮರವೊಂದು ನಡುರಸ್ತೆಯಲ್ಲೇ ಮೂರು ಕಾರುಗಳ ಮೇಲೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಮರದ ಕೆಳಗೆ ಸಿಲುಕಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೂಡಲೇ ಸ್ಥಳೀಯರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಬಿಎಂಪಿ ಅರಣ್ಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದು, ಕಬ್ಬನ್ ಪಾರ್ಕ್ (Cubbon Park) ಸಂಚಾರಿ ಪೊಲೀಸರು (Traffic Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








