ರಾಯಚೂರು: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಪತಿ ಜೈಲಿಗೆ ಹೋಗಿದ್ದಕ್ಕೆ ಪತ್ನಿ ವಿಜಯಲಕ್ಷ್ಮೀ ನೊಂದು ಹೋಗಿದ್ದಾರೆ. ಈ ವೇಳೆ ಟೆಂಪಲ್ ರನ್ ನಡೆಸಿದ್ದಾರೆ.
ನಟ ದರ್ಶನ್‌ಗಾಗಿ (Darshan) ಪತ್ನಿ ವಿಜಯಲಕ್ಷ್ಮಿ ಈಗ ಮಂತ್ರಾಲಯ (Mantralayam) ಗುರುರಾಯರ ದರ್ಶನ ಪಡೆದಿದ್ದಾರೆ. ಸಾಮಾನ್ಯ ಭಕ್ತರಂತೆ ವಿಜಯಲಕ್ಷ್ಮಿ (Vijayalakshmi), ರಾಯರ ದರ್ಶನ ಪಡೆದು ದೇವರಲ್ಲಿ ಪ್ರಾರ್ಥಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಜಯಲಕ್ಷ್ಮೀ ಅವರೊಂದಿಗೆ ಸಹೋದರ ದಿನಕರ್ ಕೂಡ ಇದ್ದರು. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಜಯಲಕ್ಷ್ಮೀ ಅವರು ಬುಧವಾರ ರಾತ್ರಿಯೇ ಮಂತ್ರಾಲಯಕ್ಕೆ ಬಂದು ತಂಗಿದ್ದರು. ಗುರುವಾರ ಬೆಳಗ್ಗೆ ರಾಯರು ಹಾಗೂ ಪ್ರಹ್ಲಾದರಾಜರಿಗೆ ಪಾದಪೂಜೆ ನೆರವೇರಿಸಿದ್ದಾರೆ. ಪ್ರಹ್ಲಾದರಾಜರಿಗೆ ಪಾದಪೂಜೆ ಸೇವೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದಾಗಿ ವಿಜಯಲಕ್ಷ್ಮಿ ಪಾದಪೂಜೆ ಮಾಡಿದ್ದಾರೆ.
ಪತಿ ದರ್ಶನ್‌ಗೆ ಬಂದೊದಗಿರುವ ಕಷ್ಟಗಳು ದೂರಾಗಲಿ ಎಂದು ರಾಯರಲ್ಲಿ ವಿಜಯಲಕ್ಷ್ಮಿ ಪ್ರಾರ್ಥಿಸಿದ್ದಾರೆ. ಸಾಮಾನ್ಯ ಭಕ್ತರಂತೆ ಸೇವಾ ಟಿಕೆಟ್ ಪಡೆದು ವಿಜಯಲಕ್ಷ್ಮೀ ಅವರು ದರ್ಶನ ಪಡೆದಿದ್ದಾರೆ.








