ಖರ್ಟೋಮ್: ಸುಡಾನ್ನ (Sudan) ಸೆನ್ನಾರ್ (Sennar) ಪಟ್ಟಣದ ಮೇಲೆ ರಾಪಿಡ್ ಸಪೋರ್ಟ್ ಫೋರ್ಸ್ (RSF) ಶೆಲ್ ದಾಳಿ (Shell Attack) ನಡೆಸಿದ ಪರಿಣಾಮ ಕನಿಷ್ಠ 21 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ 70ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಜೂನ್ ಅಂತ್ಯದಲ್ಲಿ ಆರ್ ಎಸ್ ಎಫ್ ಸೆನ್ನಾರ್ ರಾಜ್ಯದ ರಾಜಧಾನಿಯಾಗಿರುವ ಸಿಂಗಾವನ್ನು ವಶಪಡಿಸಿಕೊಂಡಿತು. ಸೆನ್ನಾರ್ ನಗರದ ನಿಯಂತ್ರಣಕ್ಕಾಗಿ ಸೈನ್ಯದೊಂದಿಗೆ ಹೋರಾಡುತ್ತಿದೆ. ಸುಡಾನೀಸ್ ಡಾಕ್ಟರ್ಸ್ ನೆಟ್ ವರ್ಕ್ ತನ್ನ ಹೇಳಿಕೆಯಲ್ಲಿ, ಶೆಲ್ ದಾಳಿಯು ನಗರದ ಮುಖ್ಯ ಮಾರುಕಟ್ಟೆ ಗುರಿಯಾಗಿಸಿಕೊಂಡಿದೆ.
ಅಲ್ಲದೇ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಖ್ಯೆ 150ನ್ನೂ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ತರಕಾರಿ ಮತ್ತು ಮೀನು ಮಾರುಕಟ್ಟೆಗಳು, ಸಾರ್ವಜನಿಕ ಸಾರಿಗೆ ನಿಲ್ದಾಣ ಮತ್ತು ವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿಯಾಗಿದೆ ಎಂದು ಮಿಲಿಟರಿ ಮೂಲಗಳು ಹೇಳಿವೆ.








