ಚಿತ್ರದುರ್ಗ: ಕ್ಲೋರಿನ್ ಗ್ಯಾಸ್ ಸೋರಿಕೆಯಾದ ಪರಿಣಾಮ 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ (Chitradurga) ಹೊಸದುರ್ಗ (Hosadurga) ಪಟ್ಟಣದಲ್ಲಿ ಈ ಘಟನೆ ನಡೆದಿದೆ. ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಗ್ಯಾಸ್ ವಾಟರ್ ಟ್ಯಾಂಕ್ ಬಳಿ ಲೀಕ್ (Chlorine Gas Leak) ಆಗಿದ್ದರಿಂದಾಗಿ ಈ ಘಟನೆ ನಡೆದಿದೆ.
ಎಪಿಎಂಸಿ ಬಳಿಯ ಅಕ್ಕಪಕ್ಕದ ನಿವಾಸಿಗಳು ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿದ್ದಾರೆ. ಅಲ್ಲದೇ ಈ ವೇಳೆ ವಾಂತಿಯೂ ಆಗಿದೆ. ಕೂಡಲೇ ಅಸ್ವಸ್ಥರನ್ನು ತಕ್ಷಣ ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
15 ಕ್ಕೂ ಹೆಚ್ಚು ಜನರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








