ಚೆನ್ನೈ: ಭಾರತ (Team India), ಬಾಂಗ್ಲಾದೇಶದ (Bangladesh) ಮಧ್ಯೆ ಮೊದಲ ಟೆಸ್ಟ್ ನ (Test Cricket) ಎರಡನೇ ದಿನ ಬರೋಬ್ಬರಿ 17 ವಿಕೆಟ್ ಪತನವಾಗಿವೆ.
ಈ ವಿಕೆಟ್ ಗಳ ಪತನದ ನಂತರ ಭಾರತ ತಂಡ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಅಲ್ಲದೇ, ಭಾರತದ ಮೂರು ವಿಕೆಟ್ ಉರುಳಿವೆ. ಆದರೂ ಭಾರತ ತಂಡ 308 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಮೊದಲ ದಿನ 339 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಆ ಮೊತ್ತಕ್ಕೆ 37 ರನ್ ಗಳಿಸಿ 376 ರನ್ಗಳಿಗೆ ಆಲೌಟ್ ಅಗಿದೆ.
ಆದರೆ, ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾಗೆ ಮಾತ್ರ ಭಾರತೀಯ ಬೌಲರ್ ಗಳು ಕಾಡಿದರು. ಅಂತಿಮವಾಗಿ 47.1 ಓವರ್ ಗಳಲ್ಲಿ 149 ರನ್ ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು. 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 23 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿ, ಕ್ರೀಸ್ ನಲ್ಲಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ 10 ರನ್, ರೋಹಿತ್ ಶರ್ಮಾ 5 ರನ್, ವಿರಾಟ್ ಕೊಹ್ಲಿ 17 ರನ್ ಹೊಡೆದು ಔಟಾಗಿದ್ದಾರೆ. ಶುಭಮನ್ ಗಿಲ್ ಔಟಾಗದೇ 33 ರನ್, ರಿಷಭ್ ಪಂತ್ ಔಟಾಗದೇ 12 ರನ್ ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.