ನೆಲಮಂಗಲ: ಈರುಳ್ಳಿ ತುಂಬಿದ್ದ ಟೆಂಪೋಗೆ ಹಿಂಬದಿಯಿಂದ ಕಂಟೇನರ್ (Container) ಡಿಕ್ಕಿ ಹೊಡೆದ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು (Bengaluru) ಹೊರವಲಯದ ನೆಲಮಂಗಲದ (Nelamangala) ಅಂಚೆಪಾಳ್ಯದ (Anchepalya) ಹತ್ತಿರ ನಡೆದಿದೆ. ತುಮಕೂರು ಮಾರ್ಗವಾಗಿ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ತುಂಬಿದ ಟೆಂಪೋಗೆ ಹಿಂಬದಿಯಿಂದ ವೇಗವಾಗಿ ಬಂದು ಕಂಟೇನರ್ ಡಿಕ್ಕಿ ಹೊಡೆದಿದೆ.
ಪರಿಣಾಮ ಟೆಂಪೋ ಪಲ್ಟಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ ಗಂಗಾಧರಪ್ಪ (55) ಸಾವನ್ನಪ್ಪಿದ್ದಾರೆ. ಚಾಲಕ ಓಬಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಜನರು ಮಾತ್ರ ಮಾನವೀಯತೆ ಮರೆತು ಈರುಳ್ಳಿ ತುಂಬಿಕೊಳ್ಳಲು ಮುಗಿ ಬಿದ್ದಿದ್ದರು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಎರಡೂ ವಾಹನಗಳನ್ನು ತೆರವು ಮಾಡಿದ್ದಾರೆ.