ಚಿಕ್ಕೋಡಿ ಹತ್ತಿರವಿರುವ ಕೃಷ್ಣಾ ನದಿ ದರೂರ ಸೇತುವೆ ಮೇಲಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆದರೆ, ಯುವಕನೋರ್ವ ಸಿನಿಮೀಯ ರೀತಿಯಲ್ಲಿ ಮಹಿಳೆಯನ್ನು ರಕ್ಷಿಸಿದ್ದಾನೆ.ಭಾನುವಾರ ಬೆಳಿಗ್ಗೆ ದರೂರ ಸೇತುವೆ ಮೇಲಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ಶೇಗುಣಸಿ ಗ್ರಾಮದ ಯುವಕ ಪ್ರಶಾಂತ ಗಸ್ತಿ ಎಂಬಾತ ನದಿಗೆ ಹಾರಿ ಹಗ್ಗದ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾನೆ.
ಮಹಿಳೆ ಅಥಣಿ ತಾಲೂಕಿನ ತೀರ್ಥ ಗ್ರಾಮದವರು ಎನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.








