ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ಪರಾರಿಯಾಗುವ ವಾಹನಗಳ ಫೋಟೋವನ್ನ ಕ್ಷಣಾರ್ಥದಲ್ಲಿ ಸೆರೆ ಹಿಡಿದ ಮೈಸೂರಿನ ದೇವರಾಜ ಸಂಚಾರಿ ಠಾಣೆ ಪೇದೆ ವಿದ್ಯಾಸಾಗರ್ಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕಳೆದ ವಾರದಲ್ಲಿ ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣರಾಜ ಒಡೆಯರ್ ವೃತ್ತದ ಉತ್ತರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಎಫ್ಟಿವಿಆರ್ ಮಾಡಿಸಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು.
ಈ ಪೈಕಿ ಪೇದೆ ವಿದ್ಯಾಸಾಗರ್ ಸುಮಾರು 159 ಸಂಚಾರ ಉಲ್ಲಂಘನೆ ಪ್ರಕರಣಗಳ ಪೋಟೋವನ್ನು ಕ್ಷಣಾರ್ಧದಲ್ಲಿ ತೆಗೆದು ಎಫ್ಟಿವಿಆರ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾಸಾಗರ್ಗೆ ಇನ್ಸ್ಪೆಕ್ಟರ್ ಮುನಿಯಪ್ಪ ಅವರು ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.
ಅದೇ ರೀತಿ ಪೇದೆಗಳಾದ ಛತ್ರಪತಿ ಹಾಗೂ ಗುರುಮಲ್ಲಪ್ಪ ಸಹಾ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು ಅವರಿಗೂ ಸಹಾ ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ.
ಸಿಗ್ನಲ್ ಜಂಪ್ ಮಾಡುವುದು, ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ವಾಹನ ಚಲಾಯಿಸುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ ವಾಹನ ಸವಾರರ ಪೋಟೋ ಸೆರೆಯಾಗಿದ್ದು ಅವರಿಗೆ ನೋಟಿಸ್ ಕಳಿಸಲಾಗಿದೆ. ವಾಹನ ಸವಾರರೇ ತಿಳಿದು ತಿಳಿದು ಸಂಚಾರಿ ನಿಯಮ ಉಲ್ಲಂಘಿಸಿದ್ರೇ ನಿಮ್ಮ ಮನೆ ಬಾಗಿಲಿಗೂ ದಂಡ ಕಟ್ಟುವಂತೆ ನೋಟಿಸ್ ಬರಬಹುದು ಎಚ್ಚರ.
ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...








