ಬೆಂಗಳೂರು: ತಿರುಪತಿ ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬಳಕೆಯಾಗಿರುವ ವಿಚಾರ ಬಹಿರಂಗವಾಗುತ್ತಿದ್ದಂತೆ ಈಗ ಕರ್ನಾಟಕದಲ್ಲಿಯೂ ತುಪ್ಪದ ಪರೀಕ್ಷೆ ನಡೆಯುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ತುಪ್ಪ (Ghee) ದ ಪರೀಕ್ಷೆ ನಡೆಸುತ್ತಿದ್ದಾರೆ. ಈ ವೇಳೆ ಕೆಲವೆಡೆ ಕಲಬೆರಕೆ ತುಪ್ಪ ಇರುವುದು ಕಂಡು ಬಂದಿದೆ.
ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಕಂಡು ಬಂದಿದೆ. ಈ ಮಧ್ಯೆ ಪರೀಕ್ಷೆ ವೇಳೆ ಬೆಂಗಳೂರು (Bengaluru) ಮತ್ತು ಬಾಗಲಕೋಟೆಯಲ್ಲಿ (Bagalkot) ತುಪ್ಪ ಸೇಫ್ ಅಲ್ಲ ಎಂದು ವರದಿ ನೀಡಿದೆ.
ಹೀಗಾಗಿ ತುಪ್ಪ ತಯಾರಿಕಾ ಘಟಕಕ್ಕೆ ಆಹಾರ ಮತ್ತು ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂದು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ. ಈ ಕುರಿತು ಮೈಸೂರಿನ ಲ್ಯಾಬ್‍ನಲ್ಲಿ ಖಚಿತತೆಯ ಪರೀಕ್ಷೆ ನಡೆಯುತ್ತಿದೆ.