ನಟ ಸಿಂಬು (Actor Simbu) ಮದುವೆ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ಸಿಂಬು ಸದ್ಯದಲ್ಲೇ ಮದುವೆಯಾಗಲಿದ್ದು, ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಜೊತೆ ಸಿಂಬು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಸದ್ಯ ಮದುವೆ ಸುದ್ದಿ ಕುರಿತು ನಟ ಸಿಂಬು ಮಾತನಾಡಿದ್ದಾರೆ.
ತೆಲುಗು ನಟಿ ನಿಧಿ ಅಗರ್ವಾಲ್ (Nidhhi Agerwal) ಜೊತೆ ಸಿಂಬು ಮದುವೆ ಆಗಲಿದ್ದಾರೆ. ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಈ ಸುದ್ದಿ ನಿಜನಾ? ಎಂಬುದಕ್ಕೆ ಸಿಂಬು ಟೀಮ್ ಸ್ಪಷ್ಟನೆ ನೀಡಿದೆ. ಈ ವಿಚಾರ ವದಂತಿಯಷ್ಟೇ, ಸತ್ಯವಲ್ಲ ಎಂದು ಸಿಂಬು ತಂಡ ಈಗ ಹೇಳಿದೆ.
2021ರಲ್ಲಿ ‘ಈಶ್ವರನ್’ ಎಂಬ ಸಿನಿಮಾದಲ್ಲಿ ಸಿಂಬುಗೆ ನಾಯಕಿಯಾಗಿ ನಿಧಿ ನಟಿಸಿದ್ದರು. ಈ ಸಿನಿಮಾ ನಂತರ ಇಬ್ಬರ ಡೇಟಿಂಗ್ ಬಗ್ಗೆ ವದಂತಿ ಹಬ್ಬಿತ್ತು. ಅಲ್ಲದೇ, ತ್ರಿಷಾ, ಹನ್ಸಿಕಾ ಮೋಟ್ವಾನಿ, ನಯನತಾರಾ ಜೊತೆ ಕೂಡ ಸಿಂಬು ಡೇಟಿಂಗ್ ಮಾಡಿದ್ದರು ಎನ್ನಲಾದ ಸುದ್ದಿಗಳು ಹರಿದಾಡಿದ್ದವು. ಆದರೆ, ಅದು ಯಾವುದು ಮದುವೆವರೆಗೆ ಬರಲಿಲ್ಲ.







