ಮುಂಬಯಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತೀಯ ಆಟಗಾರರು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ (ICC Test Rankings) ಮೇಲುಗೈ ಸಾಧಿಸಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತೊಮ್ಮೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಈ ಮೂಲಕ ನಂ. 1 ಸ್ಥಾನದಲ್ಲಿದ್ದ ಭಾರತದ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ.
ಉತ್ತಮ ಪ್ರದರ್ಶನ ತೋರಿರುವ ಆರ್. ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ರವಿಂದ್ರ ಜಡೇಜಾ 809 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ 2 ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 11 ವಿಕೆಟ್ ಪಡೆದಿದ್ದರು. ಟೆಸ್ಟ್ ನ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ – ಭಾರತ – 870 ಅಂಕ, ಆರ್. ಅಶ್ವಿನ್ – ಭಾರತ - 869 ಅಂಕ, ಜೋಶ್ ಹೇಜಲ್ವುಡ್ – ಆಸ್ಟ್ರೇಲಿಯಾ – 847 ಅಂಕ, ಪ್ಯಾಟ್ ಕಮ್ಮಿನ್ಸ್ – ಆಸ್ಟ್ರೇಲಿಯಾ 820 ಅಂಕ, ಕಗಿಸೊ ರಬಾಡ – ದಕ್ಷಿಣ ಆಫ್ರಿಕಾ – 820 ಅಂಕ ಗಳಿಸಿ ಎರಡರಿಂದ ನಾಲ್ಕು ಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಉತ್ತಮ ಪ್ರದರ್ಶನ ತೋರಿದ್ದಾರೆ. 2 ಸ್ಥಾನ ಜಿಗಿತ ಕಂಡು ಐಸಿಸಿ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಸತತ 6 ಸ್ಥಾನಗಳಲ್ಲಿ ಏರಿಕೆ ಕಂಡಿರುವ ವಿರಾಟ್ ಕೊಹ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
1. ಜೋ ರೂಟ್ – ಇಂಗ್ಲೆಂಡ್ – 899 ಅಂಕ
2. ಕೇನ್ ವಿಲಿಯಮ್ಸನ್ – ನ್ಯೂಜಿಲೆಂಡ್ – 829 ಅಂಕ
3. ಯಶಸ್ವಿ ಜೈಸ್ವಾಲ್ – ಭಾರತ – 792 ಅಂಕ
4. ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ – 757 ಅಂಕ
5. ಉಸ್ಮಾನ್ ಖವಾಜ – ಆಸ್ಟ್ರೇಲಿಯಾ – 728 ಅಂಕ ಪಡೆದಿದ್ದಾರೆ.








