ಕನ್ನಡದ ನಟ ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ (70th National Film Awards) ಇಂದು ದೆಹಲಿಯಲ್ಲಿ ನಡೆಯಿತು. ಕನ್ನಡದ ಸ್ಟಾರ್ ಗಳಾದ ರಿಷಬ್ ಶೆಟ್ಟಿ, ನಿತ್ಯಾ ಮೆನನ್ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು. ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ (Kantara) ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ (Rishab Shetty) ರಾಷ್ಟ್ರ ಪ್ರಶಸ್ತಿ ಲಭಿಸಿತು. ನಿತ್ಯಾ ಮೆನನ್ಗೆ ‘ತಿರುಚಿತ್ರಂಬಲಂ’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ‘ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಮಧ್ಯಂತರ’ ಸಿನಿಮಾಗಾಗಿ ಬೆಸ್ಟ್ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈ. ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್ ಅರಸ್ ಗೆ ರಾಷ್ಟ್ರ ಪ್ರಶಸ್ತಿ ನೀಡಲಾಯಿತು.
ಈ ವೇಳೆ, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಸುನೀಲ್ ಪುರಾಣಿಕ್, ಕರಣ್ ಜೋಹರ್, ನಿಖಿಲ್ ಸಿದ್ಧಾರ್ಥ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.







