ನವದೆಹಲಿ: ಜಮ್ಮು ಕಾಶ್ಮೀರ ಚುನಾವಣೆಯಲ್ಲಿ (Jammu Kashmir Election) ನ್ಯಾಷನಲ್ ಕಾಂಗ್ರೆಸ್, ಕಾಂಗ್ರೆಸ್, ಸಿಪಿಐ(ಎಂ) ಮೈತ್ರಿಕೂಟ ಗೆದ್ದಿದೆ.
ಬಿಜೆಪಿ 29 ಸ್ಥಾನಗಳಲ್ಲಿ ಗೆದ್ದು, ಎರಡನೇ ಅತಿ ದೊಡ್ಡ ಪಕ್ಷವಾಗಿದೆ. ಆದರೆ, ಮತಗಳಿಕೆಯಲ್ಲಿ ಮಾತ್ರ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ.
90 ಸ್ಥಾನಗಳ ಪೈಕಿ INDIA ಮೈತ್ರಿಕೂಟ 49 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ನ್ಯಾಷನಲ್ ಕಾನ್ಫರೆನ್ಸ್ 42, ಕಾಂಗ್ರೆಸ್ 6 ಮತ್ತು ಸಿಪಿಐ 1 ಕಡೆ ಗೆದ್ದಿದೆ. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿ 29 ಸ್ಥಾನ ಗೆದ್ದಿದೆ. ಪಿಡಿಪಿ ಕೇವಲ 3 ಸ್ಥಾನ ಗೆದ್ದಿದೆ. ಇನ್ನಿತರರು 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಮತ್ತೊಮ್ಮೆ ಜಮ್ಮು ಭಾಗದಲ್ಲಿ ಗೆಲ್ಲಲು ಯಶಸ್ವಿಯಾಗಿದೆ. ಕಾಶ್ಮೀರದಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಆದರೆ, ಮತ ಗಳಿಕೆಯಲ್ಲಿ ಮಾತ್ರ ಎಲ್ಲ ಪಕ್ಷಗಳಿಗಿಂತಲೂ ಬಿಜೆಪಿ ಮುಂದೆ ಇದೆ. ಮುಸ್ಲಿಂ ಮತದಾರರೇ ಹೆಚ್ಚಿರುವ ಜಮ್ಮುವಿನ ಕಿಶ್ತ್ವಾರದಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿ ಶಗುನ್ ಪರಿಹಾರ್ 521 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಶೇ. 25.64, ನ್ಯಾಷನಲ್ ಕಾನ್ಫರೆನ್ಸ್ ಶೇ. 23.43, ಕಾಂಗ್ರೆಸ್ ಶೇ. 11.97, ಪಿಡಿಪಿ ಶೇ. 8.8, ನೋಟಾ ಶೇ.. 1.48ರಷ್ಟು ಮತ ಗಳಿಕೆ ಮಾಡಿವೆ.








