ಬಾಹುಬಲಿ’ (Bahubali) ಪಾರ್ಟ್ 1 ಹಾಗೂ 2 ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿದ್ದವು. ಈ ವೇಳೆ ನಟ ಪ್ರಭಾಸ್ ಹಾಗೂ ನಿರ್ದೇಶಕ ರಾಜಮೌಳಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಈ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ‘ಬಾಹುಬಲಿ 3’ ಸಿದ್ಧವಾಗಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರದ ಕುರಿತು ರಾಜಮೌಳಿ (Rajamouli) ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಬಾಹುಬಲಿ 3’ಗಾಗಿ ಪ್ರಭಾಸ್ (Prabhas) ಮತ್ತು ರಾಜಮೌಳಿ ಜೊತೆಯಾಗಿ ಮತ್ತೆ ಕೆಲಸ ಮಾಡುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದಿದೆ.
ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆಗಿನ ಹೊಸ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಭಾಸ್ ಅವರು ‘ಕಣ್ಣಪ್ಪ’ ಮತ್ತು ‘ದಿ ರಾಜ ಸಾಬ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.