ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ದರ್ಶನ್ (Darshan) ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅವರು ಈಗ ಬೆನ್ನು ನೋವಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತ ಮೆಡಿಕಲ್ ರಿಪೋರ್ಟ್ ಇಂದು ಜೈಲು ಅಧಿಕಾರಿಗಳ ಕೈ ಸೇರಲಿದೆ.
ಬಳ್ಳಾರಿ (Ballari) ವಿಮ್ಸ್ ವೈದ್ಯರು ತಪಾಸಣೆ ಮಾಡಿರುವ ಮೆಡಿಕಲ್ ರಿಪೋರ್ಟ್ ಬುಧವಾರ ಕೈ ಸೇರಬೇಕಿತ್ತು. ಆದರೆ, ಅರ್ಥೋಪೆಡಿಕ್ ವೈದ್ಯರು ಇರದ ಹಿನ್ನೆಲೆ ರಿಪೋರ್ಟ್ ಇಂದು ಸಲ್ಲಿಕೆಯಾಗಲಿದೆ.
ಆರೋಪಿ ದರ್ಶನ್ ಗೆ ಐ1 ಮತ್ತು ಐ5 ನಲ್ಲಿ ಊತ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ಅವರು ಬೆನ್ನು ನೋವಿನಿಂದ ನೋವು ಪಡುತ್ತಿದ್ದಾರೆ. ವೈದ್ಯರು ಸ್ಕ್ಯಾನಿಂಗ್ ಮಾಡಿಸಿ ಎಂದು ಹೇಳಿದ್ದರೂ ದರ್ಶನ್ ಮಾತ್ರ ಬಳ್ಳಾರಿಯಲ್ಲಿ ಬೇಡ, ಬೆಂಗಳೂರಿನಲ್ಲೇ ಮಾಡಿಸುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.
ಅಲ್ಲದೇ, ನೋವು ಹೆಚ್ಚು ಉಲ್ಭಣವಾಗಿದ್ದರಿಂದಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ, ದರ್ಶನ್ ಮಾತ್ರ ಅಷ್ಟೊಂದು ನೋವಿನಿಂದ ಒದ್ದಾಡುತ್ತಿದ್ದರೂ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಬೇಲ್ ಸಿಕ್ಕ ಮೇಲೆ ಬೆಂಗಳೂರಿನಲ್ಲಿ ಮಾಡಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಆದರೆ, ಕೋರ್ಟ್ ಬೇಲ್ ನೀಡದಿದ್ದರೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ನೋಡಬೇಕಿದೆ.