ಬೆಂಗಳೂರು: ಭಾರತ (Team India) ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ದಿನ ಮಳೆಗೆ ಆಹುತಿಯಾಗಿತ್ತು. ಎರಡನೇ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಹೀನಾಯ ಪ್ರದರ್ಶನ ನೀಡಿದೆ.
ಪರಿಣಾಮ ನ್ಯೂಜಿಲೆಂಡ್ (New Zealand) ಉತ್ತಮ ಸ್ಥಿತಿಯಲ್ಲಿದೆ. ಪಂದ್ಯದ ಎರಡನೇ ದಿನದಾಟದಲ್ಲಿ ಕಿವೀಸ್ ಪಡೆ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಗಳನ್ನು ಕಲೆಹಾಕಿ 134 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಭಾರತದ ಆಟಗಾರರನ್ನು ಉತ್ತಮ ಬೌಲಿಂಗ್‌ನಿಂ ದ ಕಟ್ಟಿಹಾಕಿದ್ದ ನ್ಯೂಜಿಲೆಂಡ್ ತಂಡ ಕೇವಲ 46 ರನ್ ಗಳಿಗೆ ಆಲೌಟ್ ಮಾಡಿದೆ. ನಂತರ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೇ 3 ಸಿಕ್ಸರ್ ಗಳ ನೆರವಿನಿಂದ 91 ರನ್, ವಿಲ್ ಯಂಗ್ 33 ರನ್, ಟಾಮ್ ಲ್ಯಾಥಮ್ 19 ರನ್ ಗಳಿಸಿದ್ದಾರೆ. ರಚಿನ್ ರವೀಂದ್ರ 22 ರನ್, ಡೇರಿಲ್ ಮಿಚೆಲ್ 14 ರನ್ ಗಳಿಸಿ ಔಟಾಗದೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಅಶ್ವಿನ್, ಕುಲದೀಪ್ ಯಾದವ್, ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.








