ಸೋಮವಾರವೂ ರಾಜ್ಯದಲ್ಲಿ ಮುಂದುವರಿದ ಕೊರೊನಾ ಸ್ಪೋಟ- ಒಂದೇ ದಿನ 1843 ಪ್ರಕರಣ
ಬೆಂಗಳೂರು, ಜುಲೈ 7: ರಾಜ್ಯದಲ್ಲಿ ಸೋಮವಾರ ಸಹ ಕೋವಿಡ್ 19 ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಒಂದೇ ದಿನ 1843 ಪ್ರಕರಣಗಳು ವರದಿಯಾಗಿದೆ. 30 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 402 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 981 ಪ್ರಕರಣಗಳು ಪತ್ತೆಯಾಗಿದ್ದು, 10 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 15,880 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಒಟ್ಟು 1843 ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಜಿಲ್ಲಾವಾರು ಕೊರೊನಾ ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ

ಬೆಂಗಳೂರು ನಗರ – 981, ಬಳ್ಳಾರಿ – 99, ಉತ್ತರ ಕನ್ನಡ – 81, ಬೆಂಗಳೂರು ಗ್ರಾಮಾಂತರ – 68, ಧಾರವಾಡ – 56, ಕಲಬುರಗಿ – 53, ಹಾಸನ – 49, ಮೈಸೂರು – 45, ಬೀದರ್ – 44, ಉಡುಪಿ – 40, ಮಂಡ್ಯ – 39, ವಿಜಯಪುರ – 36, ಯಾದಗಿರಿ – 35, ದಕ್ಷಿಣ ಕನ್ನಡ – 34, ಬಾಗಲಕೋಟೆ – 33, ತುಮಕೂರು – 31, ಶಿವಮೊಗ್ಗ – 24, ಗದಗ – 18, ಚಾಮರಾಜನಗರ – 12, ರಾಮನಗರ – 11, ಕೋಲಾರ – 10 ಸೇರಿದಂತೆ ರಾಜ್ಯದ ಒಟ್ಟು 21 ಜಿಲ್ಲೆಗಳಲ್ಲಿ ಎರಡಂಕೆಯ ಕೋವಿಡ್ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.








