ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu-Kashmir)ಲ್ಲಿ 6 ಮಂದಿ ವಲಸೆ ಕಾರ್ಮಿಕರು ಮತ್ತು ವೈದ್ಯರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆಗೆ ಇಡೀ ದೇಶವೇ ಕೆಂಡಾಮಂಡಲವಾಗಿದೆ. ಈಗ ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಜೀವನಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರು ಹಾಗೂ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದಾಳಿಯಿಂದ ಭಯೋತ್ಪಾದಕರು (Terror Attack) ಸಾಧಿಸುತ್ತಿರುವುದು ಏನು? ಇಂತಹ ದಾಳಿಗಳಿಂದ ಪಾಕಿಸ್ತಾನವನ್ನು ಇಲ್ಲಿ ಸೃಷ್ಟಿಸಬಹುದು ಎಂದು ಭಾವಿಸುತ್ತಾರೆಯೇ? ದಾಳಿಗಳು ನಡೆದ ಮಾತ್ರಕ್ಕೆ ಕಾಶ್ಮೀರ ಪಾಕಿಸ್ತಾನ ಆಗುವುದಿಲ್ಲ ಎಂದು ಗುಡುಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಲವು ವರ್ಷಗಳಿಂದ ಉಗ್ರರ ದಾಳಿಗೆ ಸಾಕ್ಷಿಯಾಗಿದೆ. ಇದನ್ನು ಯಾವಾಗ ಕೊನೆಗೊಳಿಸಬಹುದು ಎಂಬುದರ ಕುರಿತು ಅನೇಕ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ. ಅಮಾಯಕರ ಹತ್ಯೆಯಿಂದ ಮಾತುಕತೆ ಹೇಗೆ ಸಾಧ್ಯ? ಇಂತಹ ಭಯೋತ್ಪಾದಕ ದಾಳಿಗಳು ನಮ್ಮೆಲರ ಮೇಲೆ ಪರಿಣಾಮ ಬೀರುತ್ತದೆ. ಪಾಕಿಸ್ತಾನಕ್ಕೆ ಈಗಲೂ ಹೇಳುತ್ತಿದ್ದೇನೆ ಇಂತಹ ದಾಳಿಗಳನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ಒಮಾರ್ ಅಬ್ದುಲ್ಲಾ ಅವರ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ʻಭಯೋತ್ಪಾದಕರುʼ ಅನ್ನುವ ಬದಲಿಗೆ, ಉಗ್ರರು ಎಂಬ ಪದವನ್ನು ಏಕೆ ಆಯ್ಕೆ ಮಾಡಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮಹಬೂಬಾ ಮುಫ್ತಿ ಸಹ ಆಕ್ಷೇಪ ವ್ಯಕ್ತಪಸಿದ್ದಾರೆ.







